ಬೆಂಗಳೂರು: ಕೊರೊನಾ ರೌದ್ರ ನರ್ತನ ಮುಂದುವರಿದಿದ್ದು, ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಸೆಲೆಬ್ರಟಿ ಹಾಗೂ ಕುಟುಂಬದವರಿಗೂ ಕೊರೊನಾ ಕಾಡಿದೆ. ಹೀಗಾಗಿ ಹೆಚ್ಚು ಜನ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀ ನಟ ಜಗ್ಗೇಶ್ ಸಹ ಟ್ವೀಟ್ಟರ್ ಮೂಲಕ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಇಬ್ಬರು ಬಂಧುಗಳು 3 ಜನ ಸ್ನೇಹಿತರಿಗೆ ಕೋವಿಡ್ ಬಂದು, ಇಬ್ಬರು ನಿನ್ನೆ, ಮೊನ್ನೆ ತೀರಿಹೋದರು. ಇನ್ನೂ 3 ಜನ ನರಳುತ್ತಿದ್ದಾರೆ! ಎದ್ದು ಹೋಗಿ ಸಹಾಯ ಮಾಡಲು ಆಗದು ಅಂತಹ ದರಿದ್ರ ಈ ಖಾಯಿಲೆ. ನನ್ನ ಬಂಧು ಹೆಣ ಸಂಸ್ಕಾರಕ್ಕೆ ನಾಯಿಗಳಂತೆ 30 ಸಾವಿರ ರೂ. ಹಣ ಪೀಕಿದ್ದಾರೆ. ಅಂಬುಲೆನ್ಸ್ ಹಾಗೂ ಸ್ಮಶಾನದವರನ್ನು ಹೋಗಿ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದ ಸರ್ಕಾರಕ್ಕೆ ಕೆಟ್ಟಹೆಸರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂತ್ರಸ್ತರು ನೊಂದು ಟಿವಿಯಲ್ಲಿ ಮಾತಾಡಿದ್ದು ನೋಡಿ ಸಂಕಟವಾಯಿತು. ಆಸ್ಪತ್ರೆ, ಅಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ,ನೊಂದವರ ಪೀಡಿಸಬೇಡಿ, ತಿನ್ನಲು ಅನ್ನ ಸಿಗದೆ ಸಾಯುತ್ತೀರಿ. ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ, ಸತ್ತರೆ ಹಣ ಬರುವುದಿಲ್ಲ. ಪಾಪ, ಪುಣ್ಯ ಮಾತ್ರ ನಮ್ಮ ಹಿಂದೆ ಬರುವುದು. ದೇವನೊಬ್ಬನಿರುವ ಎಲ್ಲ ನೋಡುತಿರುವ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂತ್ರಸ್ತರು ನೊಂದುTvಲಿ ಮಾತಾಡಿದ್ದು ನೋಡಿ ಸಂಕಟವಾಯ್ತು!
ಆಸ್ಪತ್ರೆ,ಆಂಬುಲೆನ್ಸ್,ಔಷಧಿ ಅಂಗಡಿ,ಸ್ಮಶಾನ ಕಾರ್ಯಕರ್ತರು
ಹಣಕ್ಕಾಗಿ ಸಾಯಬೇಡಿ,ನೊಂದವರ ಪೀಡಿಸಬೇಡಿ,ತಿನ್ನಲು ಅನ್ನಸಿಗದೆ ಸಾಯುತ್ತೀರಿ!ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ!ಸತ್ತರೆ ಹಣಬರೋಲ್ಲಾ ಪಾಪಪುಣ್ಯ ಮಾತ್ರ ನಮ್ಮಹಿಂದೆ ಬರೋದು!
ದೇವನೊಬ್ಬನಿರುವ ಎಲ್ಲ ನೋಡುತಿರುವ☠ pic.twitter.com/LmsdFfhJ1j
— ನವರಸನಾಯಕ ಜಗ್ಗೇಶ್ (@Jaggesh2) April 24, 2021
ಸರ್ಕಾರ ಹಾಗೂ ಬಿಬಿಎಂಪಿ ನಿಯಮದ ಪ್ರಕಾರ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ಮಾಡಬೇಕು. ಅಲ್ಲದೆ ಸರ್ಕಾರಿ ಅಂಬುಲೆನ್ಸ್ ಸೇವೆ ಸಹ ಉಚಿತವಾಗಿದೆ. ಹೀಗಿದ್ದರೂ ಅಂತ್ಯಸಂಸ್ಕಾರಕ್ಕೆ ಸಾವಿರಗಟ್ಟಲೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕಾಗಿ ತೀವ್ರ ಆಕ್ರೋಶ ಸಹ ವ್ಯಕ್ತವಾಗುತ್ತಿದೆ. ಇದೀಗ ನಟ ಜಗ್ಗೇಶ್ ಸಹ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.