ದೆಹಲಿ: 2020ರ ಅವಧಿಯಲ್ಲಿ ಉಂಟಾದ ನೈಸರ್ಗಿಕ ವಿಕೋಪ ಮತ್ತು ಕೀಟಗಳ ದಾಳಿಯಿಂದ ತತ್ತರಿಸಿದ್ದ 5 ರಾಜ್ಯಗಳಿಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ಸುಮಾರು 3,113 ಕೋಟಿ ಅನುಮೋದನೆ ನೀಡುವುದಾಗಿ ಶನಿವಾರ ಗೃಹ ಸಚಿವಾಲಯ ಪ್ರಕಟಿಸಿದೆ.
Advertisement
ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ(ಎನ್‍ಡಿಆರ್‍ಎಂಎಫ್) ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಮತ್ತು ಮಧ್ಯಪ್ರದೇಶಕ್ಕೆ ಹೆಚ್ಚುವರಿ ನೆರವು ನೀಡಲಾಗುತ್ತಿದೆ.
Advertisement
ನೈಋತ್ಯ ಮಾನ್ಸೂನ್‍ನಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹಕ್ಕೆ 280.78 ಕೋಟಿ ಮತ್ತು ಬಿಹಾರಕ್ಕೆ 1,255.27 ಕೋಟಿ ರೂ. ನೆರವು ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಉಂಟಾದ ನಿವಾರ್ ಚಂಡಮಾರುತಕ್ಕೆ 63.14 ಕೋಟಿ ಮತ್ತು ಬುರೆವಿ ಚಂಡಮಾರುತಕ್ಕೆ 3,22,377 ಕೋಟಿ ನೆರವು ನೀಡಲಾಗುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ 9.91 ಕೋಟಿ ರೂ. ದೊರೆತಿದೆ.
Advertisement
Advertisement
ಜೊತೆಗೆ ಮಿಡತೆ ದಾಳಿಯಿಂದ ಕೃಷಿ ನಷ್ಟಕ್ಕೆ ತುತ್ತಾಗಿದ್ದ ಮಧ್ಯ ಪ್ರದೇಶದಲ್ಲಿ 1,280.18 ಕೋಟಿ ಹಣ ನೆರವು ನೀಡಲಾಗುತ್ತಿದೆ.