– ಪಾರ್ಟಿಯಲ್ಲಿ 27 ಸೆಲೆಬ್ರಿಟಿಗಳ ಮೋಜು ಮಸ್ತಿ
– ಐಪಿಸಿ ಸೆಕ್ಷನ್ 188, 269ರ ಅನ್ವಯ ಕೇಸ್
ಮುಂಬೈ: ನೈಟ್ ಕರ್ಫ್ಯೂ ನಡುವೆಯೂ ತಡರಾತ್ರಿ ಎರಡೂವರೆವರೆಗೂ ಪಾರ್ಟಿ ಮಾಡಿದ್ದ 27 ಸೆಲೆಬ್ರಿಟಿಗಳು ಸೇರಿದಂತೆ 34 ಜನರ ವಿರುದ್ಧ ಸೆಕ್ಷನ್ 188, 269ರ ಅಡಿ ಪ್ರಕರಣ ದಾಖಲಾಗಿದೆ. ಮುಂಬೈ ವಿಮಾನ ನಿಲ್ದಾಣದ ಬಳಿಯಲ್ಲಿರೋ ಡ್ರ್ಯಾಗನ್ ಫ್ಲೈ ಕ್ಲಬ್ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿ ಸೆಲೆಬ್ರಿಟಿಗಳನ್ನ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.
Advertisement
ಈ ಪಾರ್ಟಿಯಲ್ಲಿ ಕ್ರಿಕೆಟಿಗ ಸುರೇಶ್ ರೈನಾ, ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಮತ್ತು ಗಾಯಕ ಗುರು ರಾಂಧವ್ ಸೇರಿದಂತೆ 27 ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಪೊಲೀಸ್ ದಾಳಿ ವೇಳ ಎಲ್ಲರೂ ಪಾನಮತ್ತರಾಗಿದ್ದರು ಎಂದು ವರದಿಯಾಗಿದೆ.
Advertisement
Advertisement
ಪಾರ್ಟಿಯಲ್ಲಿ ಭಾಗಿಯಾಗಲು ದೆಹಲಿಯಿಂದ 19 ಜನ ಬಂದಿದ್ದರು. ಇನ್ನುಳಿದವರು ದಕ್ಷಿಣ ಮುಂಬೈ ಮತ್ತು ಪಂಜಾಬ್ ನಿವಾಸಿಗಳು. ಹೊಸ ಕೊರೊನಾ ಅಲೆ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದೆ. ನಿಯಮದ ಪ್ರಕಾರ ರಾತ್ರಿ 11 ಗಂಟೆಯ ನಂತರ ಸಾರ್ವಜನಿಕ ಕಾರ್ಯಕ್ರಮ ಸೇರಿದಂತೆ ಹೆಚ್ಚು ಜನ ಸೇರುವಂತಿಲ್ಲ. ದಾಳಿ ವೇಳೆ ಓರ್ವ ದೊಡ್ಡ ಸಿಂಗರ್ ಹಿಂದಿನ ಗೇಟ್ ನಿಂದ ಪರಾರಿಯಾದ ಎಂದು ಪೊಲೀಸರು ಹೇಳಿದ್ದಾರೆ.
Advertisement
ಈ ಪಾರ್ಟಿಯಲ್ಲಿ ಗಾಯಕ ಬಾದ್ ಶಾ ಭಾಗಿಯಾಗಿದ್ರೂ ಎಂದು ಹೇಳಲಾಗುತ್ತಿದ್ದು, ಆದ್ರೆ ಖಚಿತವಾಗಿಲ್ಲ. ಬಹಳ ಜನ ಕ್ಲಬ್ ನಿಂದ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಸೆಕ್ಷನ್ 188ರ ಪ್ರಕಾರ ಪಾರ್ಟಿಯಲ್ಲಿ ಭಾಗಿಯಾದವರಿಗೆ 10 ಸಾವಿರ ರೂ.ವರೆಗೂ ದಂಡ ವಿಧಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಜನವರಿ 5ರ ವರೆಗೆ ನೈಟ್ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ಇಂಗ್ಲೆಂಡ್‍ನಲ್ಲಿ ಕೊರೊನಾ ಹೊಸ ರೂಪ ತಾಳಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 6 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.