ನವದೆಹಲಿ: ನೇಪಾಳ ಪೊಲೀಸರು ಮತ್ತೆ ಭಾರತೀಯ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು ಮೂವರು ಭಾರತೀಯರು ಗಾಯಗೊಂಡಿದ್ದಾರೆ. ಬಿಹಾರ ರಾಜ್ಯದ ಕಿಸಾನ್‍ಗಂಜ್‍ನಲ್ಲಿ ಭಾರತ-ನೇಪಾಳ ಗಡಿಯಲ್ಲಿ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಜೀತೇಂದ್ರ ಕುಮಾರ್ ಸಿಂಗ್ ಗಾಯಗೊಂಡು ಮೂವರಲ್ಲಿ ಒಬ್ಬನಾಗಿದ್ದು, ಖಿನಿಯಾಬಾದ್ ಪಂಚಾಯ್ತಿ ವ್ಯಾಪ್ತಿಯ ಮಾಫೀ ಟೋಲಾದ ನಿವಾಸಿ. ಜೀತೇಂದ್ರ ಕುಮಾರ್ ಪ್ರಾಥಮಿಕ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಟೇಡಾಗಾಛ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಿಶನ್‍ಗಂಝ್ ಎಸ್‍ಪಿ ಕುಮಾರ್ ಆಶೀಷ್, ನೇಪಾಳದ ಪೊಲೀಸರು ಮೂವರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮೂವರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗುಂಡಿನ ದಾಳಿ ಬಳಿಕ ಘಟನಾ ಸ್ಥಳದಲ್ಲಿ ಎಸ್‍ಎಸ್‍ಬಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.
One Indian injured after Nepal Police shot at three Indian men near India-Nepal border in Kishanganj. Injured shifted to hospital. Investigation underway: SP Kishanganj, Bihar
— ANI (@ANI) July 19, 2020
ಈ ಹಿಂದೆ ಭಾರತೀಯ ರೈತರ ಮೇಲೆ ನೇಪಾಳಿ ಪೊಲೀಸರು ದಾಳಿ ನಡೆಸಿದ್ದರು. ಇದರಲ್ಲಿ ಓರ್ವ ರೈತ ಮೃತಪಟ್ಟಿದ್ದ. ಭಾರತದ ಮೂರು ಭೂಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತಿರುವ ನೇಪಾಳ ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ಭಾರತದಲ್ಲಿ ಅಲ್ಲ ಎಂದು ಕ್ಯಾತೆ ತೆಗೆದಿತ್ತು.