-ಮಾವಿನ ಮರದಲ್ಲಿ ನೇತಾಡ್ತಿತ್ತು ಶವ
ಲಕ್ನೋ: ಉತ್ತರ ಪ್ರದೇಶದ ಸಂತ ಕಬೀರ ನಗರ ಜಿಲ್ಲೆಯ ಮಹುಲಿ ವ್ಯಾಪ್ತಿಯ ಬಶೀಯಾ ಗ್ರಾಮದಲ್ಲಿ ವಕೀಲರೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
55 ವರ್ಷದ ಅನಿಲ್ ಯಾದವ್ ಮೃತ ವಕೀಲ. ಜಿಲ್ಲಾ ಸಿವಿಲ್ ಕೋರ್ಟಿನಲ್ಲಿ ವಕೀಲರಾಗಿ ಅನಿಲ್ ಯಾದವ್ ಕೆಲಸ ಮಾಡುತ್ತಿದ್ದರು. ಶನಿವಾರ ಅವರ ಮನೆಯ 500 ಮೀಟರ್ ದೂರದಲ್ಲಿರುವ ಮಾವಿನ ಮರದಲ್ಲಿ ಶವ ಕಂಡು ಬಂದಿದೆ.
ಶುಕ್ರವಾರ ಸಂಜೆಯಿಂದ ತಂದೆ ತುಂಬಾ ಚಿಂತೆಯಲ್ಲಿದ್ದರು. ರಾತ್ರಿ ಊಟದ ಬಳಿಕವೂ ತಂದೆ ಗೊಂದಲದಲ್ಲಿರೋದನ್ನು ಕಂಡು ನಾನು ಏನಾಯ್ತು ಎಂದು ಕೇಳಿದೆ. ಆದ್ರೆ ತಂದೆಯವರು ಏನೂ ಉತ್ತರ ನೀಡಲಿಲ್ಲ. ರಾತ್ರಿ ಮನೆಯ ಮುಂದೆ ವಾಕ್ ಮಾಡಲು ಹೋದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಅನಿಲ್ ಯಾದವ್ ಪುತ್ರ ಪೊಲೀಸರು ಮುಂದೆ ಹೇಳಿದ್ದಾರೆ.
ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಆದ್ರೆ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶವವನ್ನು ಮರೋಣತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಮಹುಲಿ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಪ್ರದೀಪ್ ಸಿಂಗ್ ಹೇಳಿದ್ದಾರೆ.