ನೆಲಮಂಗಲ: ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕೋವಿಡ್ ಕೇರ್ ಸೆಂಟರ್ ಬಾಗಿಲು ಮುಚ್ಚಿದೆ. ಸುಮಾರು 10,100 ಹಾಸಿಗೆ ಎಂದು ಹೇಳಿ ಪ್ರಾರಂಭವಾಗಿದ್ದ ದೇಶದ ಅತಿದೊಡ್ಡ ಕೇರ್ ಸೆಂಟರ್ ಇದೀಗ ಖಾಲಿಯಾಗಿದೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇದೀಗ ಖಾಲಿ ಖಾಲಿ ವಾತಾವರಣ ಕಂಡಿದೆ. ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಎಂದೇ ಬಿಂಬಿಸಿದ್ದ ಕೇರ್ ಸೆಂಟರ್ ಕೆಲವೇ ತಿಂಗಳಲ್ಲಿ ಕ್ಲೋಸ್ ಆಗಿದೆ. ಕೇರ್ ಸೆಂಟರ್ ನಲ್ಲಿ ರೋಗಿಗಳು ಇಲ್ಲ, ವೈದ್ಯರು ಇಲ್ಲ ದೇಶದ ಅತಿದೊಡ್ಡ ಕೇರ್ ಸೆಂಟರ್ ಖಾಲಿಯಾಗಿದೆ.
Advertisement
Advertisement
ನೆಲಮಂಗಲ ಸಮೀಪದ ಮಾದವಾರದ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಇನ್ನೂ ಕೇವಲ ಹೆಸರಿಗೆ ಮಾತ್ರವಾಗಿದೆ. ಎ ಸಿಂಪ್ಟಮ್ಸ್ ಇರೋ ಕೋವಿಡ್ ರೋಗಿಗಳ ಚಿಕಿತ್ಸೆಗೆ ತೆರೆಯಲಾಗಿದ್ದ ಅತಿದೊಡ್ಡ ಕೇರ್ ಸೆಂಟರ್ ಇದಾಗಿತ್ತು. ಇದೀಗ ಯಾರೂ ಸೆಂಟರ್‍ಗೆ ಸೋಂಕಿತರು ಬಾರದಿರೋ ಎಂಬ ನೆಪವೊಡ್ಡಿ ಕ್ಲೋಸ್ ಮಾಡಿದ್ದಾರೆ.
Advertisement
ಕೋವಿಡ್ ಕೇರ್ ಸೆಂಟರ್‍ನಲ್ಲಿರೋ ವಸ್ತುಗಳನ್ನ ರಾಜ್ಯದ ವಿವಿಧ ಇಲಾಖೆಗೆ ಶಿಫ್ಟ್ ಆಗಿದ್ದು, ಈಗಾಗಲೇ ರಾಜ್ಯ ಸರ್ಕಾರದಿಂದ ಖರೀದಿ ಮಾಡಿದ್ದ ವಸ್ತುಗಳ ಸ್ಥಳಾಂತರವಾಗಿದೆ. ಇತ್ತ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್, ತೋಟಗಾರಿಕೆ ವಿವಿ ಹಾಸ್ಟೆಲ್, ಜಿಕೆವಿಕೆ ಹಾಗೂ ಇತರೆ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ ಎನ್ನಲಾಗಿದೆ. ಕೇರ್ ಸೆಂಟರ್ ನ ಜವಬ್ದಾರಿ ಹೊತ್ತಿದ್ದ ಬಿಬಿಎಂಪಿ ಇಂದು ಬಿಐಇಸಿಗೆ ಜಾಗ ಇಂದು ಅಧಿಕೃತವಾಗಿ ಜಾಗ ಖಾಲಿ ಮಾಡಕೊಡಲಿದೆ.