ನೆಲಮಂಗಲ ತಾಲೂಕಿನ ಜಿಲ್ಲಾ ಗಡಿ ಭಾಗದಲ್ಲಿ ಹೈ ಅಲರ್ಟ್

Public TV
1 Min Read
NML 5

– ಎರಡು ಚೆಕ್ ಪೋಸ್ಟ್‌ಗಳಲ್ಲಿ ಅಲರ್ಟ್

ಬೆಂಗಳೂರು: ಮಾರಾಣಾಂತಿಕ ಕೋವಿಡ್ 19 ಹಿನ್ನೆಲೆಯಲ್ಲಿ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಒಳಗೊಂಡಿರುವ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಿಲ್ಲಾ ಗಡಿ ಭಾಗದಲ್ಲಿ ಹೈ ಅಲರ್ಟ್ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಹೈ ಅಲರ್ಟ್ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ನೆಲಮಂಗಲ ತಾಲೂಕಿನ ಎರಡು ಚೆಕ್ ಪೋಸ್ಟ್‌ಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಕುಣಿಗಲ್ ರಸ್ತೆಯ ಲ್ಯಾಂಕೋ ಟೋಲ್ ಹಾಗೂ ಹಳೆ ನಿಜಗಲ್ ಬಳಿ ಥರ್ಮಲ್ ತಪಾಸಣೆ ನಡೆಸುತ್ತಿದ್ದು, ಪ್ರತಿ ವಾಹನ ಸವಾರರ ತಪಾಸಣೆ ಕಡ್ಡಾಯವಾಗಿದೆ.

vlcsnap 2020 05 15 13h23m13s171

ಪಾಸ್ ಇದ್ದು ಹೊರ ಜಿಲ್ಲೆಯಿಂದ ಬರುವ ವಾಹನಗಳಿಗೆ ಗ್ರೀನ್ ಸ್ಟಿಕ್ಕರ್, ಲೋಕಲ್ ವಾಹನಗಳಿಗೆ ಆರೆಂಜ್ ಸ್ಟಿಕ್ಕರ್ ಹಾಕಲಾಗುತ್ತಿದೆ. ಯಾವುದೇ ಪಾಸ್ ಇಲ್ಲದ ವಾಹನಗಳಿಗೆ ನಗರ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ ಎಂದು ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದ್ದಾರೆ.

ಯಾವುದೇ ಕುಂಟು ನೆಪವೊಡ್ಡಿ ವಾಹನ ಬಂದರೆ ಸೀಜ್ ಮಾಡಲಾಗುತ್ತದೆ. ಹೊರ ಜಿಲ್ಲೆಯಿಂದ ಬರುವ ಎಲ್ಲಾ ವಾಹನ ಹಾಗೂ ಸವಾರರಿಗೆ ಮಾದವಾರದ ಬಿಐಇಸಿ ಮೈದಾನದಲ್ಲಿ ಪರೀಕ್ಷೆ ಕಡ್ಡಾಯವಾಗಿದೆ. ಹೊರ ರಾಜ್ಯ, ಜಿಲ್ಲೆ ಹಾಗೂ ಲೋಕಲ್ ವಾಹನಗಳ ಸುಲಭ ಗುರುತಿಗಾಗಿ ಸ್ಟಿಕ್ಕರ್ ಅಳವಡಿಕೆ ಮಾಡಲಾಗಿದೆ ಎಂದು ಶ್ರೀನಿವಾಸ್ ಹೇಳಿದರು.

vlcsnap 2020 05 15 13h23m18s221

Share This Article
Leave a Comment

Leave a Reply

Your email address will not be published. Required fields are marked *