ನೆಲಮಂಗಲ: ಅನ್‍ಲಾಕ್ ಆದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಕುರಿ ಮೇಕೆ ಸಂತೆಯಲ್ಲಿ ಬಿಂದಾಸ್ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರದ ಬಳಿಕ ಗಮನವರಿಸಿದ ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Advertisement
ಜನರಲ್ಲಿ ಕೊರೋನ ನಿಯಮ ಬಗ್ಗೆ ಜಾಗೃತಿ ಮೂಡಿಸಿ, ಕೊರೋನಾ ನಿಯಮಗಳನ್ನ ಪಾಲಿಸದ ಜನರಲ್ಲಿ ಜಾಗೃತಿ ಮೂಡಿಸಿ ವಾರ್ನ್ ಮಾಡಿದ್ದಾರೆ. ಜೊತೆಗೆ ಈ ವೇಳೆ ಮಾನವೀಯತೆ ಮೆರೆದ ನೆಲಮಂಗಲ ತಹಶಿಲ್ದಾರ್ ಮಂಜುನಾಥ್, ಸಂತೆ ಸ್ಥಳದಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ನೆರವಿಗೆ ಮುಂದಾದರು. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್
Advertisement
Advertisement
ಆ ವೃದ್ಧೆಗೆ ಮಕ್ಕಳು ಇಲ್ಲ, ಯಾರೂ ಇಲ್ಲ. ಊಟಕ್ಕೆ ತೊಂದರೆ ಸ್ವಾಮಿ ಎಂದು ತಹಶೀಲ್ದಾರ್ ಬಳಿ ವೃದ್ಧೆ ತನ್ನ ನೋವನ್ನ ವ್ಯಕ್ತಪಡಿಸಿದರು. ಈ ವೇಳೆ ಆಕೆಯ ನೆರವಿಗೆ ನಿಂತ ತಹಶೀಲ್ದಾರ್, ತಮ್ಮ ವಾಹನದಲ್ಲಿ ಕೂರಿಸಿ ಕಚೇರಿಗೆ ಕರೆದೊಯ್ಯುವ ಮೂಲಕ ನೆರವಿಗೆ ಮುಂದಾದ ಘಟನೆ ನಡೆಯಿತು. ರೇಷನ್ ಕಾರ್ಡ್, ವೃದ್ಧ್ಯಾಪ್ಯ ವೇತನ ಹಾಗೂ ಇನ್ನಿತರ ನೆರವು ನೀಡುವ ಬಗ್ಗೆ ಮಾಹಿತಿ ನೀಡಿದಾಗ ತಹಶೀಲ್ದಾರ್ ನೆರವಿಗೆ ವೃದ್ಧೆ ಕೈಮುಗಿದು ಹರಸಿದ್ದಾರೆ. ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ
Advertisement