ನೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸ್ – ವಿಶೇಷ ಸಾಧನೆಗೈದ ಇಶಾಂತ್ ಶರ್ಮಾ

Public TV
1 Min Read
800 2

ಅಹಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ತಮ್ಮ ಟೆಸ್ಟ್ ವೃತ್ತಿಬದುಕಿನ ಮೊದಲ ಸಿಕ್ಸರ್ ಚಚ್ಚುವ ಮೂಲಕ ಇಶಾಂತ್ ಶರ್ಮಾ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯ ವಾಗಿಸಿಕೊಂಡಿದ್ದಾರೆ.

ishanth

ಭಾರತದ ಪರ 194 ವಿವಿಧ ಮಾದರಿಯ ಪಂದ್ಯಗಳನ್ನು ಆಡಿರುವ ಇಶಾಂತ್ ಶರ್ಮಾ 100 ಟೆಸ್ಟ್, 80 ಏಕದಿನ ಮ್ಯಾಚ್ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಾನು ಎದುರಿಸಿದ 2678ನೇ ಎಸೆತದಲ್ಲಿ ಸಿಕ್ಸ್ ಹೊಡೆದಿರುವುದು ವಿಶೇಷ.

ishanth 1

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ನಡೆಯುತ್ತಿದೆ. ಇದೇ ಮೈದಾನದಲ್ಲಿ ಇಶಾಂತ್ ಶರ್ಮಾ ಭಾರತದ ಪರ 100ನೇ ಟೆಸ್ಟ್ ಪಂದ್ಯವಾಡುತ್ತಿದ್ದು, ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‍ನ ಚೊಚ್ಚಲ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.

https://twitter.com/VSabarish_22/status/1364887700923289606

2012ರಲ್ಲಿ ಮೊಟೆರಾದಲ್ಲಿ ವೀರೇಂದ್ರ ಸೆಹ್ವಾಗ್ ಸಿಕ್ಸರ್ ಸಿಡಿಸಿದ ಬಳಿಕ ನವೀಕರಣಗೊಂಡ ವಿಶ್ವದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಇಶಾಂತ್ ಪಾತ್ರರಾಗಿದ್ದಾರೆ.

Motera stadium renamed Narendra Modi Stadium

ಭಾರತದ ಪರ 100 ಟೆಸ್ಟ್ ಪಂದ್ಯವಾಡಿದ 11ನೇ ಆಟಗಾರರಾಗಿರುವ ಇಶಾಂತ್, ಕಪಿಲ್ ದೇವ್ ಬಳಿಕ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಟೀ ಇಂಡಿಯಾದ ವೇಗಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹಾಗೆ ಇತ್ತೀಚೆಗೆ ಭಾರತದ ಪರ 300 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. ಅವರ ಸಾಧನೆಯ ಹಾದಿಗೆ ಇದೀಗ ಚೊಚ್ಚಳ ಟೆಸ್ಟ್ ಸಿಕ್ಸ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಮೂಡಿಬಂದಿರುವುದು ವಿಶೇಷವಾಗಿದೆ.

Share This Article