ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ, ಬೆಂಗಾಲಿ ನಟಿ ನುಸ್ರತ್ ಜಹಾನ್ ಸದಾ ಸುದ್ದಿಯಲ್ಲಿರುತ್ತಾರೆ. ಮೊದಲು ನಟಿಯಾಗಿ, ನಂತರ ಸಂಸದೆಯಾಗಿ ಬಳಿಕ ನಿಖಿಲ್ ಜೈನ್ ಜೊತೆ ವಿವಾಹದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಅವರು ಆರು ತಿಂಗಳ ಗರ್ಭಿಣಿ ಎಂಬ ಸುದ್ದಿಹರಿದಾಡುತ್ತಿದೆ. ಅದರೆ ನಿಖಿಲ್ ಜೈನ್ ಮಾತ್ರ ಆ ಮಗು ನನ್ನದಲ್ಲ ಎನ್ನುವ ಮೂಲಕ ಇವರ ಕೌಟುಂಬಿಕ ಕಲಹ ಬೀದಿಗೆ ಬಂದಿದೆ.

ನುಸ್ರತ್ ಈಗ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್‍ಶಿಪ್ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ:ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು
ಆದರೆ ಕೆಲ ಮಾಹಿತಿಗಳ ಪ್ರಕಾರ ನುಸ್ರತ್ ಅವರು 6 ತಿಂಗಳ ಗರ್ಭಿಣಿ ಎಂದು ಸುದ್ದಿ ಹರಿದಾಡುತ್ತಿದೆ ಆದರೆ ಇದನ್ನು ಅಧಿಕೃತವಾಗಿ ನುಸ್ರತ್ ಅವರು ಹೇಳಿಕೊಂಡಿಲ್ಲ. ಆದರೆ ನಿಖಿಲ್ ಮಾತ್ರ ಆ ಮಗು ನನ್ನದಲ್ಲ. ನಾವು 6 ತಿಂಗಳಿಂದ ಜೊತೆಯಾಗಿ ಸಂಸಾರ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ:ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು
ನುಸ್ರತ್ ಅವರ ಕುಟುಂಬ ಕಲಹಕ್ಕೆ ಬಿಜೆಪಿ ನಾಯಕ, ಬೆಂಗಾಲಿ ನಟ ಯಶ್ ದಾಸ್‍ಗುಪ್ತ ಅವರು ಕಾರಣ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ. ಯಶ್ ದಾಸ್‍ಗುಪ್ತ ಮತ್ತು ನುಸ್ರತ್ ಬೆಂಗಾಲಿಯ ‘ಒನ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು ಆ ಬಳಿಕ ಇವರಿಬ್ಬರ ನಡುವೆ ಹೆಚ್ಚಿನ ಸ್ನೇಹ ಬೆಳೆದಿತ್ತು. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿರುವ ಹಲವು ಫೋಟೋಗಳು ಹರಿದಾಡುತ್ತಿದೆ.




