ಕಲಬುರಗಿ: ಸದ್ಯ ಕೊರೊನಾ ನಂತರ ಇದೀಗ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ ಪ್ರವಾಹ ಬಂದ ಸಮಯದಲ್ಲಿ ನೀರಿನಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಕಲಬುರಗಿ ಜಿಲ್ಲಾಧಿಕಾರಿ ವಿ ವಿ.ಜ್ಯೋತ್ಸ್ನಾ ಗ್ರಾಮದಲ್ಲಿನ ನುರಿತ ಈಜು ತಜ್ಞರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಪಕ್ಷ ಒಂದು ಕುಟುಂಬ ಇದ್ದಂತೆ : ಸಚಿವ ಕೆ.ಎಸ್ ಈಶ್ವರಪ್ಪ
Advertisement
ಪ್ರವಾಹದ ನೇರವಿಗೆ ಸಂಕಷ್ಟದಲ್ಲಿರುವ ಜನರ ನೇರವಿಗಾಗಿ ಈಗಾಗಲೇ 45 ಮಾಜಿ ಸೈನಿಕರು ಕೈ ಜೋಡಿಸಿದ್ದು, ಅವರನ್ನು ಕಲಬುರಗಿ ಅಪ್ಪಾ ಕೆರೆಯಲ್ಲಿ ಎನ್‍ಡಿಆರ್‍ಎಫ್ ತಂಡದಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಬಗ್ಗೆ ಈಗ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಬೆಣ್ಣೆತೋರಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆ ನದಿಗೆ ಹೆಚ್ಚಿನ ನೀರು ಬಿಡುವ ಸಾಧ್ಯತೆಯಿದೆ. ಇದರ ಪರಿಣಾಮ ಕಮಲಾಪುರ,ಚಿಂಚೋಳಿ ತಾಲೂಕಿನ ನದಿಯಂಚಿನ ಹಲವು ಗ್ರಾಮಗಳು ಮುಳುಗಡೆಯಾಗುವದ ಸಾಧ್ಯತೆಯಿದೆ. ಹೀಗಾಗಿ ಆ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.
Advertisement
Advertisement
ಮಹಾರಾಷ್ಟ್ರದಲ್ಲಿ ಸಹ ಹೆಚ್ಚಿನ ಮಳೆಯಾಗುತ್ತಿದ್ದು, ಅಫಜಲಪುರದ ಸೊನ್ನ ಬ್ಯಾರೇಜಗೂ ಸಹ ಜೂಲೈ ಎರಡನೇ ಅಥವಾ ಮೂರನೇ ವಾರದಲ್ಲಿ ನೀರು ಬರವಂತಹ ಸಾಧ್ಯತೆಯಿದೆ. ಹೀಗಾಗಿ ಅಲ್ಲಿವರೆಗೆ 100ಕ್ಕೂ ಅಧಿಕ ನುರಿತ ಈಜುಗಾರರ ತಂಡವನ್ನು ಕಟ್ಟಿ ಅವರಿಗೆ ಸುರಕ್ಷಿತ ಕಿಟ್ ಕೊಡಲು ಜಿಲ್ಲಾಡಳಿತ ಸಜ್ಜಾಗಿದೆ.