ನೀರಿನ ತೊಟ್ಟಿಗೆ ಬಿದ್ದು ಬಾಣಂತಿ ಸಾವು- ಪೋಷಕರಿಂದ ಕೊಲೆ ಆರೋಪ

Public TV
1 Min Read
hassan SUSPECT

ಹಾಸನ : ನೀರಿನ ಸಂಪ್‍ನೊಳಗೆ(ತೊಟ್ಟಿ) ಬಿದ್ದು ಬಾಣಂತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಕೆಲವರು ಸೂಟು ಹೊಲಿಸಿ ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ: ರೇಣುಕಾಚಾರ್ಯ

Hassan SUSPECT 2 medium

ಭವ್ಯ(19) ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ ಬಾಣಂತಿಯಾಗಿದ್ದಾಳೆ. ಆದರೆ ಭವ್ಯ ಪೋಷಕರು ಇದು ಕೊಲೆಯೆಂದು ಆರೋಪಿಸುತ್ತಿದ್ದಾರೆ. ಭವ್ಯ ಎರಡು ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಕೊರೊನಾ ಕಾರಣದಿಂದ ಬಾಣಂತನಕ್ಕೆ ತವರು ಮನೆಗೆ ಹೋಗದೇ, ಗಂಡನ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಆದರೆ ಇಂದು ಭವ್ಯ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವಪ್ಪಿದ್ದಾಳೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಬಾಗಿನ, ಚಿನ್ನದ ಮೂಗುತಿ ಗಿಫ್ಟ್ ಕೊಟ್ಟ ಯುವಕ

Hassan SUSPECT6 medium

ಮೃತ ಭವ್ಯ ಸಂಬಂಧಿಕರು ಭವ್ಯ ಗಂಡ ಹಾಗೂ ಅವರ ಮನೆಯವರ ವಿರುದ್ಧ ಕೊಲೆ ಆರೋಪವನ್ನು ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಮೇಳೇನಹಳ್ಳಿ ಗ್ರಾಮದ ಭವ್ಯ ಅವರನ್ನು ತಿರುಪತಿ ಮಾಲೇಕಲ್ ಗ್ರಾಮದ ಜಗದೀಶ್ ಜೊತೆ ಮದುವೆ ಮಾಡಲಾಗಿತ್ತು. ಮದುವೆಯಾದಾಗಿನಿಂದಲೂ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಭವ್ಯ  ಪೋಷಕರು ಆರೋಪಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *