ಗಾಂಧಿನಗರ: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಸಾಧನೆಯನ್ನು ಬಂಕ್ ಮಾಲೀಕರೊಬ್ಬರು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ಹೌದು. ಗುಜರಾತ್ ನ ಭರೂಚ್‍ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ವಿಶೇಷ ಆಫರ್ ನೀಡಿ ಸುದ್ದಿಯಾಗಿದ್ದಾರೆ. ನೀರಜ್ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವ ಮೂಲಕ ನೀರಜ್ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಬಳಿಕ ರಾಷ್ಟ್ರಗೀತೆ ವೇಳೆ ನೀರಜ್ ಕಣ್ಣೀರು- ಪದಕವನ್ನು ಮಿಲ್ಕಾ ಸಿಂಗ್‍ಗೆ ಸಮರ್ಪಿಸಿದ ಸಾಧಕ
Advertisement
Advertisement
ಎರಡು ದಿನಗಳ ಕಾಲ ಅಂದರೆ ನಿನ್ನೆ ಸಂಜೆಯವರೆಗೆ ಪಠಾಣ್ ಅವರು ತನ್ನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್-ಡೀಸೆಲ್ ನೀಡಿದ್ದಾರೆ. ಪೆಟ್ರೋಲ್ ಹಾಕಿಸಿಕೊಳ್ಳುವಾಗ ಗುರುತಿನ ಚೀಟಿ ತೋರಿಸಬೇಕಿತ್ತು. ಈ ವೇಳೆ ವ್ಯಕ್ತಿಯ ಹೆಸರು ನೀರಜ್ ಎಂದು ಇದ್ದರೆ ಅವರಿಗೆ ಫ್ರೀಯಾಗಿ ಪೆಟ್ರೋಲ್ ನೀಡಲಾಗಿತ್ತು. ಪಠಾಣ್ ಅವರ ಈ ಕೊಡುಗೆಯನ್ನು ಅನೇಕ ಮಂದಿ ಸದುಪಯೋಗಪಡಿಸಿಕೊಂಡರು. ಇದನ್ನೂ ಓದಿ: ಚಿನ್ನದ ನೀರಜ್‍ಗೆ ಪ್ರಶಂಸೆಯ ಮಹಾಪೂರ – ಸರ್ಕಾರಗಳಿಂದ ಬಹುಮಾನಗಳ ಸುರಿಮಳೆ
Advertisement
Advertisement
ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ. ನೀರಜ್ ಅವರ ಈ ಸಾಧನೆಯನ್ನು ಇಡೀ ಭಾರತ ಕೊಂಡಾಡಿದೆ. ಬರೋಬ್ಬರಿ 120 ವರ್ಷಗಳ ಬಳಿಕ ಅಥ್ಲೆಟಿಕ್ ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಮೂಲಕ 23 ವರ್ಷದ ನೀರಜ್ ಚೋಪ್ರಾ ಹೀರೋ ಆಗಿ ಮಿಂಚಿದ್ದಾರೆ. ನೀರಜ್ ಅವರ ಈ ಗೆಲುವನ್ನು ಅನೇಕ ಮಂದಿ ವಿವಿಧ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ದರು. ಅದೇ ರೀತಿ ಪಠಾಣ್ ಅವರು ಕೂಡ ವಿಶೇಷವಾಗಿ ಆಚರಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ತವರಿಗೆ ಬಂದ ಟೋಕಿಯೋ ಒಲಿಂಪಿಕ್ಸ್ ವೀರರಿಗೆ ಅದ್ಧೂರಿ ಸ್ವಾಗತ – ದೆಹಲಿಯಲ್ಲಿ ಕೇಂದ್ರ ಸರ್ಕಾರದಿಂದ ಸನ್ಮಾನ
Gujarat | Ayuub Pathan, a petrol pump owner in Bharuch, offers free petrol, up to Rs 501, to people who share their names with Olympic gold medallist Neeraj Chopra.
"It is our 2-day scheme to honour him. We're entertaining all valid ID Card-holding namesakes of Chopra," he said. pic.twitter.com/PAc43jYw6Q
— ANI (@ANI) August 9, 2021