ಮುಂಬೈ: ಅಕ್ಷಯ್ ಕುಮಾರ್ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಮನರಂಜನೆ ಜೊತೆ ಒಂದೊಳ್ಳೆಯ ಸಂದೇಶ ಇರುತ್ತದೆ. ಇದೀಗ ಒಲಿಂಪಿಕ್ಸ್ ಜಾವಲಿನ್ ಎಸೆತದಲ್ಲಿ ಚಿನ್ನ ಗೆದ್ದ ಕ್ರೀಡಾಪಟು ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ್ದಾರೆ.
Leaked picture of akshay kumar from the sets of #NeerajChopra‘s biopic. . pic.twitter.com/vWZvtvVQBd
— Rishikesh (@riii_sshi) August 7, 2021
ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ನೀರಜ್ ಚೋಪ್ರಾ ಬಯೋಪಿಕ್‍ಗೆ ನಟ ಅಕ್ಷಯ ಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮೀಮ್‍ಗಳು ಹರಿದಾಡಿದ್ದವು. ಆದರೆ ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ನೀಡಿದ ಹೇಳಿಕೆ ಭಿನ್ನವಾಗಿದೆ. ಇದನ್ನೂ ಓದಿ: ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಆರ್ಹರಿದ್ದಾರೆ: ಮುರುಗೇಶ್ ನಿರಾಣಿ
ಅಕ್ಷಯ್ ಕುಮಾರ್ ಹಲವು ಬಯೋಪಿಕ್‍ನಲ್ಲಿ ನಟಿಸಿದ್ದಾರೆ ಕೂಡ. ಈ ಎಲ್ಲಾ ಕಾರಣಕ್ಕೆ ಯಾವುದೇ ವ್ಯಕ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಆ ವ್ಯಕ್ತಿಯ ಬಯೋಪಿಕ್‍ನಲ್ಲಿ ಅಕ್ಷಯ್ ನಟಿಸುತ್ತಾರೆ ಎನ್ನುವ ವಿಚಾರವಾಗಿ ಸುದ್ದಿಯಾಗಿತ್ತು. ಈ ಕುರಿತಾಗಿ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.
ನೀರಜ್ ಚೋಪ್ರಾ ಬಯೋಪಿಕ್‍ಗೆ ಅಕ್ಷಯ್ ತರಬೇತಿ ಆರಂಭಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸಾಕಷ್ಟು ಫನ್ನಿ ಎಂದು ನನಗನ್ನಿಸುತ್ತದೆ. ವೈರಲ್ ಆದ ಫೋಟೋ ನನ್ನ ಮೊದಲ ಚಿತ್ರ ಸೌಗಂಧ್ ಹಾಡೊಂದರಲ್ಲಿ ಬರುವ ದೃಶ್ಯ ಅದು. ನೀರಜ್ ಸುಂದರವಾಗಿದ್ದಾರೆ. ನನ್ನ ಬಯೋಪಿಕ್‍ನಲ್ಲಿ ಯಾರಾದರೂ ನಟಿಸಬೇಕು ಎಂದರೆ ಅದು ನೀರಜ್ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಈ ಮೂಲಕವಾಗಿ ಅಕ್ಷಕುಮಾರ್ ನೀರಜ್ ಚೋಪ್ರಾಗೆ ತಮ್ಮ ಬಯೋಪಿಕ್‍ನಲ್ಲಿ ನಟಿಸುವ ಆಫರ್ ನೀಡಿದ್ದಾರೆ.