ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ತರಬೇತಿ ನೀಡಲೆಂದು ಭಾರತ ಸರ್ಕಾರ 7 ಕೋಟಿ ರೂ. ಖರ್ಚು ಮಾಡಿದೆ.
ನೀರಜ್ ಚೋಪ್ರಾ ಭಾರತದಲ್ಲಿ ಮತ್ತು ವಿದೇಶದಲ್ಲಿ ಜಾವೆಲಿನ್ ತರಬೇತಿ ಪಡೆದಿದ್ದರು. ಹೀಗಾಗಿ ಸರ್ಕಾರ ತರಬೇತಿ ನೀಡಲು ಎಷ್ಟು ಖರ್ಚು ಮಾಡಿತ್ತು ಎಂಬ ಪ್ರಶ್ನೆಯನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದರು.
Advertisement
Advertisement
ಈ ಪ್ರಶ್ನೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಉತ್ತರ ನೀಡಿದೆ. ಟ್ವೀಟ್ ಮಾಡಿ ಒಟ್ಟು 7 ಕೋಟಿ ರೂ. ಹಣವನ್ನು ಸರ್ಕಾರ ಖರ್ಚು ಮಾಡಿದೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದೆ.
Advertisement
ನೀರಜ್ ಚೋಪ್ರಾ 450 ದಿನ ವಿದೇಶದಲ್ಲಿ, 1,167 ದಿನ ಪಟಿಯಾಲಯದಲ್ಲಿ ತರಬೇತಿ ಪಡೆದಿದ್ದಾರೆ. ಒಟ್ಟು 177 ಜಾವೆಲಿನ್‌ಗಳನ್ನು ಸರ್ಕಾರ ಖರೀದಿಸಿದೆ. ಜಾವೆಲಿನ್ ಜೊತೆಗೆ 74.28 ರೂ. ಮೌಲ್ಯದ ಜಾವೆಲಿನ್ ಎಸೆಯುವ ಯಂತ್ರವನ್ನು ಖರೀದಿ ಮಾಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ
Advertisement
Journey to the ????@Neeraj_chopra1's Gold is a cumulative effect of his grit, determination & a supporting ecosystem that stood by him. Here's how ????????'s favourite javelin thrower fulfilled the entire country's dream of winning ???? at the #Olympics#Cheer4India@PMOIndia @afiindia pic.twitter.com/28DajW0f7S
— SAI Media (@Media_SAI) August 13, 2021
ನೀರಜ್ ಚೋಪ್ರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನಕ್ಕೆ ಗುರಿಯಿಟ್ಟರು. ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.