ಬೆಂಗಳೂರು: ಶಾಸಕ ಸಂಗಮೇಶ್ ಶರ್ಟ್ ಕಹಾನಿಯ ಸತ್ಯ ಬಹಿರಂಗವಾಗಿದ್ದು, ಅವರಿಗೆ ಶರ್ಟ್ ಬಿಚ್ಚೋ ಐಡಿಯಾ ಕೊಟ್ಟಿದ್ದೇ ಜಮೀರ್ ಎಂಬುದು ಇದೀಗ ತಿಳಿದಿದೆ.
Advertisement
ಈ ಬಗ್ಗೆ ಇಂದು ಸಿಎಲ್‍ಪಿ ಸಭೆಯಲ್ಲಿ ಚರ್ಚೆಯಾಗಿದ್ದು, ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದರೆ ಹೆಚ್ಚು ಪವರ್‍ಫುಲ್ ಆಗಿರುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು ಅದಕೆ ಬಿಚ್ಚಿದೆ ಎಂದು ಸಂಗಮೇಶ್ ಹೇಳಿದ್ದಾರೆ. ಈ ವೇಳೆ ರಮೇಶ್ ಕುಮಾರ್ ಅವರು ಬುದ್ಧಿವಾದ ಹೇಳಿದ್ದು, ಜಮೀರ್ ಹೇಳ್ತಾನೆ ಅಂತಾ ನಾಳೆ ಪ್ಯಾಂಟ್ ಕಳಚಿಬಿಟ್ಟಿಯಾ? ಮರ್ಯಾದೆ ತೆಗೆಯೋಕೆ ಎಂದು ಹೇಳಿದ್ದಾರೆ. ಆಗ ಸಂಗಮೇಶ್ ಮತ್ತೆ ಪ್ರತಿಕ್ರಿಯಿಸಿ, ಅವರು ಹೇಳಿದರು ನಾನು ಬಿಚ್ಚಿದೆ ಎಂದಿದ್ದಾರೆ.
Advertisement
Advertisement
ರಮೇಶ್ ಕುಮಾರ್ ಮತ್ತೆ ಮಧ್ಯೆ ಪ್ರವೇಶಿಸಿ ಅದೇ ಅವನು ಹೇಳ್ತಾನೆ ನೀನು ಬಿಚ್ತೀಯಾ, ಎಲ್ಲಿ ಅವನು ಎಂದು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಸಿಎಲ್‍ಪಿ ಸಭೆಯಲ್ಲಿ ಶರ್ಟ್ ಬಿಚ್ಚಿದ್ದರ ಕುರಿತು ಫುಲ್ ರಮೇಶ್ ಕುಮಾರ್ ಹಾಗೂ ಸಂಗಮೇಶ್ ಮಧ್ಯ ಭಾರೀ ಚರ್ಚೆಯಾಗಿದೆ.
Advertisement
ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಸಂಗಮೇಶ್ ಅಶಿಸ್ತು ಪ್ರದರ್ಶಿಸಿದ್ದರು. ಈ ಹಿನ್ನೆಲೆ ಮಾರ್ಚ್ 12ರ ವರೆಗೆ ಸಂಗಮೇಶ್‍ರನ್ನು ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶಿಸಿದ್ದಾರೆ. ನಿಯಮ 348ರ ಅಡಿ ಅಮಾನತು ಮಾಡಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಡಿಸಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವ ನಿಯಮಾವಳಿಗಳಲ್ಲಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ತಕ್ಷಣವೇ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದ್ದರು. ಅಲ್ಲದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸಂಗಮೇಶ್ ಬಾವಿಗಿಳಿದಾಗ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ದರು.