– ಮಹಾರಾಷ್ಟ್ರದಿಂದ ಬಂದ 135 ಜನ ಕ್ವಾರಂಟೈನ್‍ಗೆ ಶಿಫ್ಟ್
ಉಡುಪಿ: ನಿಸರ್ಗ ಚಂಡಮಾರುತ ಎಫೆಕ್ಟ್ ರೈಲು ಸಂಚಾರದ ಮೇಲೂ ಬಿದ್ದಿದೆ. ಮುಂಬೈ-ಎರ್ನಾಕುಲಂ ರೈಲು ಎರಡು ದಿನ ವಿಳಂಬವಾಗಿ ಬಂದಿದೆ. ಈ ರೈಲಲ್ಲಿ ಮಹಾರಾಷ್ಟ್ರದಿಂದ ಉಡುಪಿಗೆ 135 ಜನ ಬಂದಿದ್ದಾರೆ.
ಕೊರೊನಾ ಲಾಕ್ ನಂತರ ಬಂದ ಮೊದಲ ಪ್ಯಾಸೆಂಜರ್ ರೈಲು ಇದಾಗಿದ್ದು, ಎರಡು ದಿನ ಬೀಸಿದ ನಿಸರ್ಗ ಚಂಡಮಾರುತದಿಂದ ರೈಲು ವಿಳಂಬವಾಗಿ ಬಂದಿದೆ. ಮುಂಬೈನಿಂದ ಉಡುಪಿಗೆ ಬಂದ 135 ಜನ ಪ್ರಯಾಣಿಕರನ್ನು ಹೋಟೆಲ್ ಮತ್ತು ಸರ್ಕಾರಿ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಮುಂಬೈ- ಎರ್ನಾಕುಲಂ ಲೋಕಮಾನ್ಯ ತಿಲಕ್ ಎಕ್ಸಪ್ರೆಸ್ ಬಂದ ಕೂಡಲೇ ಆರೋಗ್ಯ ತಪಾಸಣೆ ಮಾಡಲಾಯ್ತು.
ರೈಲು ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನೋಡಲ್ ಆಫೀಸರ್ ಗಳ ಮೂಲಕ ನೋಂದಣಿ ಪ್ರಕ್ರಿಯೆ ನಡೆದಿದ್ದು, ಕೈಗೆ ಸೀಲ್ ಹಾಕಿ ಹೋಟೆಲ್ ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಮಂಗಳೂರಿಗೆ ಡೈರೆಕ್ಟ್ ಫ್ಲೈಟ್ ಬರುವ ವ್ಯವಸ್ಥೆ ಆಗಬೇಕು. ಬೆಂಗಳೂರಿಗೆ ಹೋಗಿ ಅಲ್ಲಿಂದ ಉಡುಪಿಗೆ ಬರಲು ಕಷ್ಟವಾಗುತ್ತದೆ. ನಾವು ಪಾಕಿಸ್ತಾನದಿಂದ ಬಂದವರಲ್ಲ, ನಾವು ಕರ್ನಾಟಕದವರೇ, ಹೊಟ್ಟೆಪಾಡಿಗೆ ದುಡಿಯಲು ಮುಂಬೈಗೆ ಹೋದವರು ಎಂದು ಸತ್ಯ ಶೆಟ್ಟಿ ನೋವು ತೋಡಿಕೊಂಡರು.