ಯಾದಗಿರಿ: ಜಿಲ್ಲಾಡಳಿತದ ನಿಷೇಧ ನಡುವೆಯೂ ಯಾದಗಿರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ ಮಾಡಲಾಯಿತು.
ಕೊರೊನಾ ಆತಂಕ ಹಿನ್ನೆಲೆ ಜಿಲ್ಲಾಡಳಿತದಿಂದ ಸಾರ್ವಜನಿಕವಾಗಿ ನಡೆಸುವ ಹೋಳಿ ಹಬ್ಬಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೆ ಒಂದು ದಿನದ ಮಟ್ಟಿಗೆ ಮದ್ಯ ಮಾರಾಟವನ್ನು ಸಹ ನಿಷೇಧ ಮಾಡಲಾಗಿದೆ. ಹೀಗಿದ್ದರೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನ ಸಡಗರ ಸಂಭ್ರಮದಿಂದ ಬಣ್ಣದೋಕಳಿಯಲ್ಲಿ ಮಿಂದೆದ್ದರು.
ನಗರದಲ್ಲಿ ಯುವಕರು ಮತ್ತು ಯುವತಿಯರು ತಮ್ಮ-ತಮ್ಮ ಏರಿಯಾಗಳಲ್ಲಿ ಒಬ್ಬರ ಮೇಲೆ ಒಬ್ಬರು ಬಣ್ಣ ಹಾಕಿ, ತಮಟೆ ಸದ್ದಿಗೆ ಸಖತ್ ಸ್ಟೇಪ್ ಹಾಕಿದರೆ, ಗ್ರಾಮೀಣ ಭಾಗದ ವಿವಿಧ ತಾಂಡಗಳಲ್ಲಿ ಬಂಜಾರ ಸಮುದಾಯದವರು ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕಿ ಖುಷಿಪಟ್ಟರು.