ವಿಜಯಪುರ: ಕರ್ತವ್ಯದಲ್ಲಿದ್ದಾಗ ಬೇರೆಯವರ ಸಮಸ್ಯೆ ಬಗೆಹರಿಸುತ್ತಿದ್ದ ಪೊಲೀಸ್ ಅಧಿಕಾರಿಗೆ ಭಾನಾಮತಿ ಕಾಟ ಪ್ರಾರಂಭವಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿ ನಿವೃತ್ತ ಎಎಸ್‍ಐ ಬಸವರಾಜ ಲಿಂಗದಳ್ಳಿ ಮನೆಗೆ ಕೊರಿಯರ್ ಮುಖಾಂತರ ಭಾನಾಮತಿಯ ವಸ್ತುಗಳು ಬರುತ್ತಿವೆ. ಕಳೆದ ಮೂರು ವರ್ಷಗಳಿಂದ ಈ ರೀತಿ ಭಾನಾಮತಿಯ ಕೊರಿಯರ್ ಕಾಟ ಶುರುವಾಗಿದ್ದು, ಇದುವರೆಗೆ ನಾಲ್ಕು ಕೊರಿಯರ್ ಬಂದಿವೆಯಂತೆ.
ಕೊರಿಯರ್ ನಲ್ಲಿ ಗೊಂಬೆ, ಡಬ್ಬಣ, ಸೂಜಿ, ಅರಿಶಿಣ, ಕುಂಕುಮ, ಮೆಣಶಿನಕಾಯಿ, ನಿಂಬೆಹಣ್ಣು ಸೇರಿದಂತೆ ಇತರೇ ವಸ್ತುಗಳು ಬರುತ್ತವೆ. ಪರಿಚಯಸ್ಥರ ಹೆಸರಿನಲ್ಲಿ ಕೊರಿಯರ್ ಮೂಲಕ ಬಾನಾಮತಿ ವಸ್ತುಗಳು ಬರುತ್ತಿವೆ.
ಈ ಸಂಬಂಧ ಮುದ್ದೇಬಿಹಾಳ ಠಾಣೆಗೆ ದೂರು ಸಲ್ಲಿಸಿದ್ರೂ ಖದೀಮರು ಸಿಗುತ್ತಿಲ್ಲವಂತೆ. ಪೊಲೀಸ್ ಇಲಾಖೆಗೆ ಇದೊಂದು ತಲೆನೋವು ಕೇಸ್ ಆಗಿ ಹೋದಿದ್ದು, ಬಸವರಾಜ ಲಿಂಗದಳ್ಳಿ ಕುಟುಂಬಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.