ಬೆಂಗಳೂರು: ನಿವೃತ್ತ ಆರ್‌ಬಿಐ ಅಧಿಕಾರಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿ ಮಗನನ್ನು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿಯ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಕೊಲೆ ನಡೆದಿತ್ತು. ಕೊಲೆಯಾದ ವ್ಯಕ್ತಿಯನ್ನು ನಿವೃತ್ತ ಆರ್‌ಬಿಐ ಅಧಿಕಾರಿ ಅಮರನಾಥ್(62) ಎಂದು ಗುರುತಿಸಲಾಗಿತ್ತು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರ ಮನನ್ ತನ್ನ ತಂದೆಯನ್ನು ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಡರಾತ್ರಿ ತಂದೆ ಮಗನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನನ್ ತಂದೆಗೆ ಚಾಕು ಇರಿದಿದ್ದ. ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಾದಲ್ಲಿ ನೆಲೆಸಿದ್ದ ಅಮರನಾಥ್ ಅವರು ಇತ್ತೀಚೆಗಷ್ಟೆ ಆರ್‌ಬಿಐ ಕ್ವಾಟ್ರರ್ಸ್‍ನಲ್ಲಿ ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಮಗ ಮನನ್ ರಾತ್ರಿ ತಂದೆ ಜೊತೆ ಜಗಳವಾಡಿದ್ದಾನೆ. ಈ ವೇಳೆ ಮಗ ಮನನ್ ಚಾಕುವಿನಿಂದ ತಂದೆಗೆ ಇರಿದು ಕೊಲೆ ಮಾಡಿದ್ದ.