ಬೆಂಗಳೂರು: ಬಿಗ್‍ಬಾಸ್ ಮನೆ ಎಂದರೆ ಹೈ ಡ್ರಾಮಾ ಎಂದು ಗೊತ್ತು. ಪ್ರತಿಯೊಬ್ಬರು ಒಂದೊಂದು ಮುಖವಾಡ ತೊಟ್ಟು ನಾಟಕವಾಡುತ್ತಾರೆ ಅಂತ ಅಲ್ಲಿಯವರೇ ಹೇಳುತ್ತಿರುತ್ತಾರೆ. ಒಬ್ಬೊಬ್ಬರ ಮುಖವಾಡ ಕಳಚಿ ಬೀಳುತ್ತಿದೆ. ಹೀಗಿರುವಾಗ ಮನೆಯವರ ದೃಷ್ಟಿಯಲ್ಲಿ ನಿರ್ಮಲಾ ಎಂದರೆ ಕೊಂಚ ವಿಭಿನ್ನ. ಇವರ ಕುರಿತಾಗಿ ಅವರದ್ದೇ ಟೀಮ್‍ನವರು ಮಾತನಾಡಿಕೊಂಡಿದ್ದಾರೆ.
ಕೊರೊನಾ ವೈರಸ್ ಥೀಮ್‍ನಲ್ಲೊಂದು ಆಟವನ್ನು ಆಡಿಸಲಾಗುತ್ತಿದೆ. ವೈರಸ್ ಹಾಗೂ ಮನುಷ್ಯರ ಎಂದು ಆಟವಾಡುತ್ತಿದ್ದಾರೆ. ಆಟದ ವೇಳೆ ನಿರ್ಮಲಾ ಗಾಯಗೊಂಡಿದ್ದಾರೆ. ಆದರೆ ನಾನು ಆಟವಾಡುತ್ತೇನೆ ಎಂದು ಅವರ ತಂಡವದರ ಬಳಿ ನಿರ್ಮಲಾ ಕೇಳಿದ್ದಾರೆ. ಈ ವೇಳೆ ಶಂಕರ್ ಅಶ್ವಥ್, ನಿಧಿ ಸುಬ್ಬಯ್ಯ, ರಘು, ರಾಜೀವ್ ಅವರು ನಿರ್ಮಲಾ ಅವರ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಮಾಡುತ್ತಿದ್ದಾರೆ..!
ನಿರ್ಮಲಾ ಅವರು ತಲೆಯನ್ನು ಯಾರೋ ಆಪರೇಟ್ ಮಾಡುತ್ತಿದ್ದಾರೆ. ಯಾರೋ ಕ್ರೇಜಿ ಅವರು ಎಂದು ಹೇಳಿ ನಕ್ಕಿದ್ದಾರೆ. ನಿರ್ಮಲಾ ಅವರು ಸಖತ್ ಟ್ಯಾಲೆಂಟ್. ಏನಾದರೂ ಹೇಳಿ ಸುಮ್ಮನಾಗಲ್ಲ ಕೈ ಬಾಯಿ ಆಡಿಸುತ್ತಾರೆ. ಆದರೆ ಜಗತ್ತಿನಲ್ಲಿ ಮುಖ್ಯವಾಗಿ ಕೈ, ಬಾಯಿ ಹಿಡಿತ ಇರಬೇಕು ಎಂದು ಹೇಳಿ ರಘು ಹೇಳಿದ್ದಾರೆ.
ನಿರ್ಮಲಾನಂತೆ ಮಿಮಿಕ್ರಿ ಮಾಡಿದ ಶಂಕರ್ ಅಶ್ವಥ್!
ಹೋಗು ಮನೆಗೆ ನಿನ್ನ ಹಣೆಬರ ಮನೆಗೆ ಹೋಗಬೇಕು ಎಂದೆ ಇದೆ, ದೇವರು ಇಲ್ಲಿವರೆಗೂ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಮನಸ್ಸು ಒಳ್ಳೆಯದು ಆದರೆ ಏನೊ ಹೊಸ ತರ ಮಾಡಲು ಹೋಗುತ್ತಾರೆ. ಈ ವೇಳೆ ನಿನ್ನ ಹೆಸರು ಏನು ಎಂದು ನಿರ್ಮಲಾ ಬಳಿ ಕೇಳಿದರೆ ಅವರ ಹೇಗೆ ಮತನಾಡುತ್ತಾರೆ ಎಂಬುದನ್ನು ಆ್ಯಕ್ಟ್ ಮಾಡಿ ಶಂಕರ್ ತೋರಿಸಿದ್ದಾರೆ ಈ ವೇಳೆ ಅಲ್ಲಿದ್ದ ವೈರಸ್ ಟೀಮ್ ತಂಡದ ಸದಸ್ಯರು ಅವರದ್ದೇ ಸದಸ್ಯರ ಕುರಿತಾಗಿ ಮಾತನಾಡಿ ಜೋರಾಗಿ ನಕ್ಕಿದ್ದಾರೆ.
ಬಿಗ್ ಬಾಸ್ ಮನೆ ಒಂದು ವಾರ ಶಾಂತವಾಗಿತ್ತು. ಯಾವುದೇ ಜಗಳ ಎಂದು ಇರಲಿಲ್ಲಲ. ಆದರೆ ಬಿಗ್‍ಬಾಸ್ ಅಸಲಿ ಆಟ ಶುರುವಾಗಿದೆ. ಎಲ್ಲರ ನಗುಮುಖದ ಹಿಂದಿರುವ ಮುಖವಾಡ ಒಂದೊಂದಾಗಿಯೇ ಹೊರ ಬರುತ್ತಿದೆ. ಈ ಎಲ್ಲರ ನಗು, ಜಗಳ, ಆಟದ ಹಿಂದೆ ಇರುವವರು ಬಿಗ್‍ಬಾಸ್