ಬೆಂಗಳೂರು: ಬೆಂಗಳೂರು ಸೇಫ್ ಸಿಟಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 619 ಕೋಟಿ ಹಗರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ವಿಚಾರದಲ್ಲಿ ಹಸ್ತಕ್ಷೇಪ ಆರೋಪ ಎದುರಿಸುತ್ತಿರೋ ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
Advertisement
ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ, ಜನರ ಹಣ ಮತ್ತು ಸರ್ಕಾರದ ಹಣ ಪೋಲಾಗಬಾರದೆಂದು ಕರೆಮಾಡಿದ್ದು ನಿಜ. ಇದರಲ್ಲಿ ಯಾವುದೇ ಹಿತಾಸಕ್ತಿಯೂ ಇರಲಿಲ್ಲ. ಕೆಲವೊಂದು ದಾಖಲೆಯ ಬಗ್ಗೆ ನಮಗೆ ಮೊದಲಿಂದಲೂ ಅನುಮಾನ ಇದೆ. ಅಲ್ಲದೇ ಇದೇ ಸಂದರ್ಭದಲ್ಲಿ ಈ ಟೆಂಡರ್ ಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ದಾಖಲೆ ಬಿಡುಗಡೆ ಮಾಡಿದ್ದಾರೆ.
Advertisement
Advertisement
ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಗುತ್ತಿಗೆ ನೀಡುವ ಬದಲಾಗಿ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗುತ್ತಿದೆ ಅಂತ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಬಿಇಎಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಿತ್ತು. ಈ ದೂರಿನ ಅನ್ವಯ ಗೃಹ ಇಲಾಖೆಯೂ ತನಿಖೆಯನ್ನು ನಡೆಸಿದಾಗಿಯೇ ಮಾಹಿತಿ ಬಹಿರಂಗವಾಗಿದೆ. ಅಷ್ಟೇ ಅಲ್ಲದೇ ಸೇಫ್ ಸಿಟಿ ವಿಚಾರದಲ್ಲಿ ಅಕ್ರಮ ನಡೆಯುತ್ತಾ ಇದೆ ಅಂತ ಅಖಿಲ ಭಾರತ ಭ್ರಷ್ಟಾಚಾರ ಸಂಘದ ಶರದ್ ಅಜಾದ್ ಕೂಡ ಕರ್ನಾಟಕ ಸರ್ಕಾರ ಗೃಹ ಇಲಾಖೆಗೆ ದೂರನ್ನು ನೀಡಿದ್ದರು ಅನ್ನೋ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
Advertisement
ಬೆಂಗಳೂರು ಸುರಕ್ಷತೆ ಮತ್ತು ಸರ್ಕಾರದ ಹಣದ ಸುರಕ್ಷತೆಗಾಗಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ಈ ರೀತಿ ಮಾಡಿಲ್ಲ ಅಂತ ಸ್ಪಷ್ಟೀಕರಣ ನೀಡಿದ್ದಾರೆ.