ಹುಬ್ಬಳ್ಳಿ: ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ಗೆ ಮಾತೃ ವಿಯೋಗವಾಗಿದೆ. 53 ವರ್ಷದ ಕಸ್ತೂರಮ್ಮ ಬಡಿಗೇರ್ ಅವರು ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವ 2.30ಕ್ಕೆ ನಿಧನರಾಗಿದ್ದಾರೆ.
ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಕಸ್ತೂರಮ್ಮ ಅಗಲಿದ್ದಾರೆ. ಇನ್ನು ಅರುಣ್ ತಂದೆ ಚಂದ್ರಶೇಖರ್ ಬಡಿಗೇರ್ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅರುಣ್ ಸಹೋದರ, ಸಹೋದರಿ ಇಬ್ಬರಿಗೂ ಕೂಡ ಸೋಂಕು ತಗಲಿದೆ.
Advertisement
Advertisement
ಇದೇ 25ಕ್ಕೆ ಅರುಣ್ ಸಹೋದರಿಯ ಮದುವೆ ನಿಶ್ಚಿತವಾಗಿತ್ತು. ಅರುಣ್ ಬಡಿಗೇರ್ ತಾಯಿ ನಿಧನಕ್ಕೆ ಪಬ್ಲಿಕ್ ಟಿವಿ ಬಳಗ ಕಂಬನಿ ಮಿಡಿದಿದೆ.
Advertisement