ಭೋಪಾಲ್: ನಿರಾಶ್ರಿತರನ್ನು ಟ್ರಕ್‍ನಲ್ಲಿ ತುಂಬಿಸಿ ನಗರ ಹೊರ ವಲಯದ ಪ್ರದೇಶಗಳಲ್ಲಿ ಬಿಟ್ಟು ಬರುತ್ತಿರುವ ಘಟನೆ ಮಧ್ಯಪ್ರದೇಶದ ಇಂದೂರ್‍ನಲ್ಲಿ ನಡೆದಿದೆ.
ಬಸ್ ನಿಲ್ದಾಣ, ಹೆದ್ದಾರಿ ಬದಿಯಲ್ಲಿ ಇರುವ ನಿರಾಶ್ರಿತರನ್ನು ಟ್ರಕ್‍ಗೆ ತುಂಬಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಿರಾಶ್ರಿತರನ್ನು ನಗರದ ಹೊರವಲಯದ ಕ್ಷಿಪ್ರ ಎಂಬಲ್ಲಿ ಬಿಟ್ಟು ಬರಲಾಗುತ್ತಿದೆ. ಕ್ಷಿಪ್ರ ಗ್ರಾಮಸ್ಥರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವೀಡಿಯೋವನ್ನು ಸಾರ್ವಜನಿಕರು ಸೆರೆಹಿಡಿದಿದ್ದಾರೆ.
Advertisement
In India’s cleanest city team of Indore Municipal Corporation dumped aged destitutes on outskirts, later when villagers opposed lugged them back on truck, 2 officials suspended one transferred @ndtv @soniandtv @Suparna_Singh @manishndtv @vinodkapri @rohini_sgh @GargiRawat pic.twitter.com/mLAWc0Pdcd
— Anurag Dwary (@Anurag_Dwary) January 29, 2021
Advertisement
ಓರ್ವ ವೃದ್ಧೆಯನ್ನು ಬಲವಂತವಾಗಿ ಟ್ರಕ್‍ಗೆ ಹತ್ತಿಸಲಾಗುತ್ತಿದೆ. ವಸ್ತಗಳನ್ನು ಚಲ್ಲಾಪಿಲ್ಲಿಯಾಗಿ ರಸ್ತೆ ಬದಿಗೆ ಬಿಸಾಡಿದ್ದಾರೆ. ವಿವರಿಸುವ ದೃಶ್ಯ ಮನ ಕಲುಕುವಂತಿದೆ. ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಕೃತ್ಯಕ್ಕೆ ಸಮಜಾಯಿಷಿ ನೀಡಿರುವ ಪಾಲಿಕೆಯ ಹೆಚ್ಚುವರಿ ಆಯುಕ್ತ, ನಿರಾಶ್ರಿತರನ್ನು ರಾತ್ರಿ ನಿರಾಶ್ರಿತರ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಿದ್ದಾರೆ. ಹೊರಗಡೆ ಅವರನ್ನು ಬಿಟ್ಟು ಬಂದಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ್ದಾರೆ.
Advertisement