ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್‍ಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ನಿರ್ದೆಶಕ ಪ್ರಶಾಂತ್ ನೀಲ್‍ಗೆ ಚಂದನವನದ ನಟರಷ್ಟೇ ಅಲ್ಲದೆ ಟಾಲಿವುಡ್‍ನ ಬಿಗ್ ಸ್ಟಾರ್‌ಗಳು ಶುಭಾಶಯ ತಿಳಿಸಿದ್ದಾರೆ.
View this post on Instagram
ಉಗ್ರಂ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಟ ಶ್ರೀ ಮುರುಳಿಯವರಿಗೆ ಮತ್ತೆ ಬ್ರೇಕ್ ತಂದು ಕೊಟ್ಟ ಪ್ರಶಾಂತ್ ನೀಲ್ ರಾಕಿಂಗ್ ಸ್ಟಾರ್ ಕೆಜಿಎಫ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ನೋಡುವಂತೆ ಕೆಜಿಎಫ್ ಬಹುದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಅಲ್ಲದೆ ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಪಟ್ಟಕ್ಕೇರಿಸಿತು.
ಈ ವಿಶೇಷ ದಿನದಂದು ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್, ಹುಟ್ಟು ಹಬ್ಬದ ಶುಭಾಶಯ ಸೋದರ ಪ್ರಶಾಂತ್ ನೀಲ್. ಎಂದಿಂಗೂ ಅದ್ಬುತವಾಗಿರಿ, ನಿಮ್ಮ ಸೈನ್ಯವನ್ನು ಸೇರಿಕೊಳ್ಳಲು ಕಾಯಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ
Happy Birthday brother @prashanth_neel .Be as awesome as always. Can’t wait to join forces ????????. God Bless !
— Jr NTR (@tarak9999) June 4, 2021
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್, ನಮ್ಮ ಸಲರ್ ನಿರ್ದೇಶಕ ಪ್ರಶಾಂತ್ ನೀಲ್‍ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ನಟ ಶ್ರೀಮುರಳಿ, ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಮೈತ್ರಿ ಮೂವಿ ಮೇಕರ್ಸ್ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.
Wishing our #Salaar director @prashanth_neel a very Happy Birthday.#HBDPrashanthNeel #Prabhas pic.twitter.com/aeIAjDLj5k
— Prabhas (@PrabhasRaju) June 4, 2021
ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಮೂವಿ ನಟ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನು ಓದಿ: ಹಿರಿಯ ಕಲಾವಿದೆ ಬಿ.ಜಯಾ ನಿಧನ
A man of few words but a captain who takes his team along to heights ????
Wishing our dearest @prashanth_neel a very Happy Birthday ????
A Surprise Glimpse: https://t.co/CYzI9CElBs
Can’t wait to celebrate #KGFChapter2 #Salaar on the big screen.#HBDPrashanthNeel pic.twitter.com/ixL9Mp4vBm
— Hombale Films (@hombalefilms) June 4, 2021