– ಹುಟ್ಟುಹಬ್ಬಕ್ಕೆ ವಿಶ್ ಮಾಡಿದವ್ರಿಗೆ ಧನ್ಯವಾದ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 73ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗಳೇ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ತನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ನನ್ನ ಹುಟ್ಟು ಹಬ್ಬಕ್ಕೆ ರಾಜ್ಯದಾದ್ಯಂತ ಹಿರಿಯ-ಕಿರಿಯ ಸ್ನೇಹಿತರು,ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಹಾರೈಕೆ ಜನರ ಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದೆ.
ನಿಮ್ಮ ಸೇವೆಯ ಮೂಲಕವೇ ನಿಮ್ಮ ಪ್ರೀತಿಯ ಋಣ ತೀರಿಸಲು ಪ್ರಯತ್ನಿಸುವೆ. pic.twitter.com/kf8qqSIH45
— Siddaramaiah (@siddaramaiah) August 12, 2020
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನನ್ನ ಹುಟ್ಟುಹಬ್ಬಕ್ಕೆ ರಾಜ್ಯದಾದ್ಯಂತ ಹಿರಿಯ-ಕಿರಿಯ ಸ್ನೇಹಿತರು, ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಹಾರೈಕೆ ಜನರ ಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದೆ. ನಿಮ್ಮ ಸೇವೆಯ ಮೂಲಕವೇ ನಿಮ್ಮ ಪ್ರೀತಿಯ ಋಣ ತೀರಿಸಲು ಪ್ರಯತ್ನಿಸುವೆ ಎಂದು ಬರೆದುಕೊಂಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ವಿವಿಧೆಡೆ ಪೂಜೆ ಹಾಗೂ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸದಾನಂದ ಗೌಡ, ನಟ ದುನಿಯಾ ವಿಜಿ, ಸಂಸದ ಪ್ರತಾಪ್ ಸಿಂಹ, ಸಚಿವ ಸುಧಾಕರ್, ಶ್ರೀರಾಮುಲು, ಆರ್ ಅಶೋಕ್ ಹಾಗೂ ಎಂಬಿ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಶುಭಾಶಯ ತಿಳಿಸಿದ್ದರು. ಇದನ್ನು ಓದಿ: ಎಂಟೆದೆಯ ಬಂಟನಿಗೆ ಹುಟ್ಟುಹಬ್ಬದ ಶುಭಾಶಯಗಳು: ಸಿದ್ದುಗೆ ದುನಿಯಾ ವಿಜಿ ವಿಶ್
ಹಿರಿಯ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಆತ್ಮೀಯರೂ ಆಗಿರುವ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.@siddaramaiah
— B.S.Yediyurappa (@BSYBJP) August 12, 2020