ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು ಬೆಂಗಳೂರಿನ ಮನೆಯ ಬಾಲ್ಕನಿ ವ್ಯೂ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್‍ಮೆಂಟ್‍ನಲ್ಲಿರುವ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ಪಂಡಿತ್ ಬಾಲ್ಕನಿಯಲ್ಲಿ ನಿಂತಿದ್ದಾರೆ. ಆಗಸದಲ್ಲಿ ಸಣ್ಣದಾಗಿ ಕಾಮನಬಿಲ್ಲು ಕೂಡ ಮೂಡಿದೆ. ಈ ದೃಶ್ಯ ರಾಧಿಕಾಗೆ ಮುದ ನೀಡಿದೆ. ಹೀಗಾಗಿ, ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ನಿಮ್ಮ ಹೊಸ ಮನೆಯನ್ನು ತೋರಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್
View this post on Instagram
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹಾಸನದ ಕನಸಿನ ಮನೆಯ ಗೃಹ ಪ್ರವೇಶ ಈ ತಿಂಗಳ ಆರಂಭದಲ್ಲಿ ನೆರವೇರಿತ್ತು. ಕೊರೊನಾ ಇರುವ ಕಾರಣ ಕೇವಲ ಆಪ್ತರ ಸಮ್ಮುಖದಲ್ಲಿ ಗೃಹ ಪ್ರವೇಶದ ಕಾರ್ಯಗಳನ್ನು ಯಶ್-ರಾಧಿಕಾ ದಂಪತಿ ಪೂರ್ಣಗೊಳಿಸಿದ್ದರು. ಹಲವು ತಿಂಗಳ ಕಾಲ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಅವೆಲ್ಲವೂ ಪೂರ್ಣಗೊಂಡಿದ್ದು, ಜುಲೈ 1ರಂದು ಗೃಹ ಪ್ರವೇಶದ ಕಾರ್ಯಗಳು ನಡೆದಿದ್ದವು. ಈ ಸಂದರ್ಭದಲ್ಲಿ ಯಶ್ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
View this post on Instagram
ರಾಧಿಕಾ ಪಂಡಿತ್ ತಮ್ಮ ಮಕ್ಕಳ ಪಾಲನೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ರಾಧಿಕಾ ಆಗಾಗ ತಮ್ಮ ಮಕ್ಕಳ ಮುದ್ದಾದ ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ರಾಧಿಕಾ ಅವರ ತಂದೆ ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ಭಜನೆಯ ಹಾಡೊಂದನ್ನು ಹಾಡಿದ್ದರು ಈ ಭಜನೆ ಹಾಡನ್ನು ಕೇಳಿದ ರಾಧಿಕಾ ಪಂಡಿತ್ ಇದು ನನ್ನ ಅಚ್ಚುಮೆಚ್ಚಿನ ಭಜನೆ ಹಾಡಗಿದೆ ಎಂದು ಮೆಚ್ಚುಗೆ ಸೂಚಿಸಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದರು.