ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ: ತಂದೆಯ ಪುಣ್ಯತಿಥಿಗೆ ರಾಹುಲ್ ನಮನ

Public TV
1 Min Read
Rahul Gandhi Rajiv Gandhi

ನವದೆಹಲಿ: ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಪ್ಪ ರಾಜೀವ್ ಗಾಂಧಿಯವರ ಪುಣ್ಯತಿಥಿಗೆ ನಮನ ಸಲ್ಲಿಸಿದ್ದಾರೆ.

ಇಂದು ಭಾರತದ 6ನೇ ಪ್ರಧಾನ ಮಂತ್ರಿಯಾಗಿ ಸೇವೆಸಲ್ಲಿಸಿದ್ದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ, ಈ ಸಮಯದಲ್ಲಿ ಅಪ್ಪನನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ರಾಹುಲ್, ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರಧಾನ ಮಂತ್ರಿಯಾಗಿ ರಾಜೀವ್ ಜಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸಿದ್ದಾರೆ. ದೇಶವನ್ನು ಮುಂದೆ ತೆಗದುಕೊಂಡು ಹೋಗುವ ದೃಷ್ಟಿಯಿಂದ ಮತ್ತು ರಾಷ್ಟ್ರವನ್ನು ಸಬಲೀಕರಣಗೊಳಿಸಲು ಅವರು ಅನೇಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂದು ಅವರ ಪುಣ್ಯ ತಿಥಿಯಂದು ನಾನು ಅವರಿಗೆ ಪ್ರೀತಿಯಿಂದ ಮತ್ತು ಕೃತಜ್ಞತೆಯಿಂದ ವಂದಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಈ ವಿಚಾರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ, ಪುಣ್ಯತಿಥಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ದೇಶಕ್ಕಾಗಿ ಪ್ರಾಣಬಿಟ್ಟ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರಿಗೆ ತುಂಬು ಹೃದಯದ ನಮನ ಎಂದು ಬರೆದುಕೊಂಡಿದ್ದಾರೆ.

Rajiv Gandhi Getty

ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರಂಬುದೂರ್ ಗೆ ಬಂದಿದ್ದ ರಾಜೀವ್ ಗಾಂಧಿಯವರನ್ನು 1991 ಮೇ 21ರಂದು ಹತ್ಯೆ ಮಾಡಲಾಗಿತ್ತು. ಭಾಷಣ ಮಾಡಲು ಸ್ಟೇಜ್ ಕಡೆ ಹೋಗುತ್ತಿದ್ದಾಗ ರಾಹುಲ್ ಗಾಂಧಿ ಬಳಿ ಬಂದ ಮಹಿಳಾ ಸೂಸೈಡ್ ಬಾಂಬರ್ ತೆನ್ಮೋಜಿ ರಾಜರತ್ಮಂ ಆರ್.ಡಿ.ಎಕ್ಸ್ ಬಾಂಬ್ ಬ್ಲಾಸ್ಟ್ ಮಾಡಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದಳು. ಈ ವೇಳೆ ರಾಜೀವ್ ಗಾಂಧಿ ಜೊತೆ ಇನ್ನೂ 14 ಮಂದಿ ಸಾವನ್ನಪ್ಪಿದ್ದರು.

Share This Article
Leave a Comment

Leave a Reply

Your email address will not be published. Required fields are marked *