ಮುಂಬೈ: ತಮ್ಮ ನಟನೆಯನ್ನ ಮೆಚ್ಚಿ ಕಮೆಂಟ್ ಮಾಡಿದ ಅಭಿಮಾನಿಗೆ ನಟ ಅಭಿಷೇಕ್ ಬಚ್ಚನ್ ಧನ್ಯವಾದ ಸಲ್ಲಿಸಿದ್ದು, ತಂದೆ ಅಮಿತಾಬ್ ಬಚ್ಚನ್ ಅವರಿಗೆ ಯಾರು ಸರಿಸಾಟಿ ಇಲ್ಲ ಅಂತ ಹೇಳಿದ್ದಾರೆ.
ಅಭಿಷೇಕ್ ಬಚ್ಚನ್ ನಟನೆ ‘ದಿ ಬಿಗ್ ಬುಲ್’ ಚಿತ್ರ ಓಟಿಟಿ ಪ್ಲಾಟ್‍ಫಾರಂನಲ್ಲಿ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಜೊತೆಗೆ ವೀಕ್ಷಕರಿಗೆ ಅಭಿಷೇಕ್ ಬಚ್ಚನ್ ನಟನೆ ಇಷ್ಟವಾಗಿದ್ದು, ಟ್ವೀಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲಿ ಓರ್ವ ಅಭಿಮಾನಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಬಚ್ಚನ್, ತಂದೆಗೆ ನಾನು ಸಮನಲ್ಲ ಎಂದು ತಿಳಿಸಿದ್ದಾರೆ.
ನಾನು ಬಿಗ್ ಬುಲ್ ನೋಡಿದೆ. ನನ್ನ ಪ್ರಕಾರ ನಿಮ್ಮ ನಟನೆ ಬಿಗ್ ಬಿ ಅವರಿಗಿಂತ ಉತ್ತಮವಾಗಿತ್ತು. ಒಳ್ಳೆಯದಾಗಲಿ ಗುರು ಸೋದರ ಎಂದು ನಿತಿನ್ ಎಂಬವರು ಸಿನಿಮಾದ ಬಗ್ಗೆ ಮತನಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬಚ್ಚನ್, ನಿಮ್ಮ ಹೊಗಳಿಗೆ ತುಂಬಾ ಧನ್ಯವಾದಗಳು. ಆದ್ರೆ ತಂದೆಯವರಿಗಿಂತ ಉತ್ತರರಾಗಿರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.
Thank you very much for your compliment sir. But nobody, NOBODY can be better than him. ????????
— Abhishek ???????????????????????????????? (@juniorbachchan) May 8, 2021
ಈ ಹಿಂದೆಯೂ ಅಭಿಷೇನ್ ಬಚ್ಚನ್ ಹಲವು ಸಂದರ್ಶನಗಳಲ್ಲಿ ತಂದೆಯ ದೈತ್ಯ ಅಭಿನಯವನ್ನ ಹಾಡಿ ಹೊಗಳಿದ್ದರು. ಎಷ್ಟೇ ಸಿನಿಮಾ ಮಾಡಿದರೂ ನಾನು ಅವರಿಗೆ ಸಮನಾಗಲ್ಲ ಅಂತ ಹೇಳಿಕೊಂಡಿದ್ದಾರೆ. ಇದೀಗ ಅಭಿಮಾನಿಯ ವಿಶೇಷ ಮೆಚ್ಚುಗೆಗೆ ತಮ್ಮ ಹೇಳಿಕೆಯನ್ನ ಪುನರುಚ್ಛಿಸಿದ್ದಾರೆ.