ಬೆಂಗಳೂರು: ನಿಮ್ಮ ಜೊತೆ ಸ್ಪರ್ಧೆ ಮಾಡಲ್ಲ ಪಾಜಿ ಎಂದು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಮಾಡಿದ ಟ್ವೀಟ್‍ಗೆ ಆರ್‌ಸಿಬಿ ಆಟಗಾರ ದೇವದತ್ ಪಡಿಕಲ್ ಅವರು ಉತ್ತರ ನೀಡಿದ್ದಾರೆ.
ನಿನ್ನೆಯ ವೀಕೆಂಡ್ ಧಮಾಕದ ಮೊದಲ ಮ್ಯಾಚಿನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ಪಡಿಕಲ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಗೆದ್ದು ಬೀಗಿತ್ತು. ಕೊಹ್ಲಿ ಮತ್ತು ಪಡಿಕಲ್ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದ್ದರು.
Advertisement
Form is temporary class is forever ! @imVkohli however I haven’t seen this boy out of form since last 8 years which is unbelievable actually ! Paddikal looks really good need to bat together and see who hits longer ????
— Yuvraj Singh (@YUVSTRONG12) October 3, 2020
Advertisement
ಕೊಹ್ಲಿ ಮತ್ತು ಪಡಿಕಲ್ ಬ್ಯಾಟಿಂಗ್ ಮೆಚ್ಚಿ ಟ್ವೀಟ್ ಮಾಡಿದ್ದ ಯುವರಾಜ್ ಅವರು, ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಎಂಬುದು ಎಂದಿಗೂ ಇರುತ್ತದೆ. ಕಳೆದ ಎಂಟು ವರ್ಷದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬಲು ಆಗದ ಮಾತು. ಪಡಿಕಲ್ ತುಂಬು ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಅವರ ಜೊತೆ ಬ್ಯಾಟ್ ಮಾಡಬೇಕು ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ಎಂದು ನೋಡಬೇಕು ಎಂದು ಹೇಳಿದ್ದರು.
Advertisement
Not competing with you paji. ???? Learnt the flick from you. Always wanted to bat with you. Let’s go!???? https://t.co/dpGkmpLBfJ
— Devdutt Padikkal (@devdpd07) October 3, 2020
Advertisement
ಯುವರಾಜ್ ಅವರ ಕಮೆಂಟ್ ನೋಡಿ ರೀಟ್ವೀಟ್ ಮಾಡಿರುವ ಪಡಿಕಲ್ ಅವರು, ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ ಪಾಜಿ. ನಾನು ಫ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮ ಜೊತೆ ಬ್ಯಾಟಿಂಗ್ ಮಾಡುವ ಆಸೆ ಇದೆ. ಬನ್ನಿ ಎಂದು ಬರೆದಿದ್ದಾರೆ. ಜೊತೆಗೆ ಯುವರಾಜ್ ಅವರ ಟ್ವೀಟ್‍ಗೆ ಕೊಹ್ಲಿ ಅವರು ಕಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭದಿಂದಲೂ ರಾಜಸ್ಥಾನ ಬೌಲರ್ ಗಳನ್ನು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಿಸಿದ ಪಡಿಕ್ಕಲ್ ಐಪಿಎಲ್ 2020ರ ಆವೃತ್ತಿಯಲ್ಲಿ 3ನೇ ಅರ್ಧ ಶತಕ ಸಿಡಿಸಿದರು. 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ತಂಡ 124 ರನ್ ಗಳಿಸಿದ್ದ ಸಂದರ್ಭದಲ್ಲಿ, ಭಾರೀ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಐಪಿಎಲ್ 2020ರ ಆವೃತ್ತಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‍ನಲ್ಲಿ ವಿಫಲವಾಗಿದ್ದ ಕೊಹ್ಲಿ ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದರು. ಇನ್ಸಿಂಗ್ ಆರಂಭದಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಕೊಹ್ಲಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೊತೆಗೆ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿ ನಿನ್ನೆಯ ಪಂದ್ಯದಲ್ಲಿ ಅಜೇಯರಾಗಿ ಉಳಿದ್ದರು.