– ನಯವಾಗಿಯೇ ಉತ್ತರಿಸಿದ ದಿವ್ಯಾ ಉರುಡುಗ
ಬಿಗ್ ಬಾಸ್ 2ನೇ ಇನ್ನಿಂಗ್ಸ್ ಆರಂಭವಾಗಿದೆ, ಸ್ಪರ್ಧಿಗಳ ಹಾರಾಟ, ಚೀರಾಟ ಜೋರಾಗಿದೆ. ಜಗಳ, ಸೆಂಟಿಮೆಂಟ್, ಕಾಡಿಮಿ ಮೂಲಕ ಮನರಂಜಿಸುತ್ತಿದ್ದಾರೆ. ಆದರೆ ಇದರ ಜೊತೆಗೆ 2ನೇ ಇನ್ನಿಂಗ್ಸ್ ನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಫುಲ್ ಕಿಕ್ ನಿಡುತ್ತಿದೆ. ಇದೀಗ ಕಿಚ್ಚ ಸುದೀಪ್ ದಿವ್ಯಾ ಉರುಡುಗ ಅವರಿಗೆ ಕೇಳಿದ ಪ್ರಶ್ನೆ ಸಹ ಸಖತ್ ಕುತೂಹಲ ಮುಡಿಸಿದೆ. ಇದಕ್ಕೆ ದಿವ್ಯಾ ಸಹ ನಯವಾಗಿಯೇ ಉತ್ತರಿಸಿದ್ದಾರೆ.
ಈ ಕುರಿತು ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ಅವರು ದಿವ್ಯಾ ಉರುಡುಗ ಅವರಿಗೆ ಅಚ್ಚರಿಯ ಪ್ರಶ್ನೆಯನ್ನು ಕೇಳುತ್ತಾರೆ. ದಿವ್ಯಾ ಸಹ ಅಷ್ಟೇ ನಾಜೂಕಾಗಿ ಉತ್ತರಿಸಿದ್ದಾರೆ. ಆರಂಭದಲ್ಲಿ ಸುದೀಪ್ ಅವರು ಅರವಿಂದ್ ಅವರಿಗೆ ನಿಮ್ಮ ಪ್ರಕಾರ ಮನೆಯಲ್ಲಿ ಬೆಸ್ಟ್ ಡ್ರೆಸ್ಟ್ ಯಾರು (ಯಾರ ಉಡುಪು ಚೆನ್ನಾಗಿದೆ ಆಗಿದೆ?) ಎಂದು ಪ್ರಶ್ನಿಸುತ್ತಾರೆ. ಆಗ ಅರವಿಂದ್ ಉತ್ತರಿಸಿ ದಿವ್ಯಾ ಉರುಡುಗ ಎನ್ನುತ್ತಾರೆ. ಥಟ್ಟನೇ ಸುದೀಪ್ ಪ್ರತಿಕ್ರಿಯಿಸಿ, ತುಂಬಾ ಬದಲಾವಣೆ ಆಗಿದೆ ರೀ ಎನ್ನುತ್ತಾರೆ.
ಬಳಿಕ ದಿವ್ಯಾ ಉರುಡುಗ ಅವರನ್ನು ಪ್ರಶ್ನಿಸಿ ದಿವ್ಯಾ ಉರುಡುಗ ಅವರೇ, ಫ್ರೆಂಡ್ ರಿಸಲ್ಟ್‍ನಲ್ಲಿ ನಿಮ್ಮಿಬ್ಬರಲ್ಲಿ ಒಬ್ಬರು ಮನೆಯಲ್ಲಿ ಉಳಿಯಬಹುದು, ಒಬ್ಬರು ಹೊರಗೆ ಹೋಗಬೇಕು ಎಂಬ ಆಯ್ಕೆಯನ್ನು ನಿಮಗೆ ಬಿಟ್ಟರೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸುತ್ತಾರೆ. ಆಗ ಡಿಯು ಫುಲ್ ಶಾಕ್ ಆಗುತ್ತಾರೆ. ಸರ್ ಇಬ್ಬರೂ ಎಂದು ಆರಂಭದಲ್ಲಿ ಹೇಳುತ್ತಾರೆ ಬಳಿಕ ಎಂತ ಸರ್ ಎಂದು ಒಂದು ಕ್ಷಣ ತಲೆ ತಗ್ಗಿಸುತ್ತಾರೆ. ಆದರೆ ಇವರ ಉತ್ತರ ಏನು ಎಂಬುದು ಫುಲ್ ಎಪಿಸೋಡ್ ಪ್ರಸಾರವಾದಮೇಲೇ ತಿಳಿಯಬೇಕಿದೆ.
ಬಿಗ್ ಬಾಸ್ 2ನೇ ಇನ್ನಿಂಗ್ಸ್ ಸಖತ್ ಕಿಕ್ಕೇರಿಸುತ್ತಿದ್ದು, ಸ್ಪರ್ಧಿಗಳು ಫುಲ್ ಜೋಶ್‍ನಲ್ಲಿದ್ದಾರೆ. ಅಲ್ಲದೆ ಕಳೆದ ಬಾರಿ ಮಾಡಿದ ತಪ್ಪುಗಳನ್ನು ಈ ಬಾರಿ ಮಾಡಲ್ಲ, ಒಬ್ಬರಿಗೇ ಸೀಮಿತವಾಗಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ಅರವಿಂದ್ ಹಾಗೂ ದಿವ್ಯಾ ಉರುಡುಗ, ಮತ್ತೊಂದು ಜೋಡಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್. ಆದರೆ ಈ ಜೋಡಿಗಳು ಅಂತರ ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿದೆ. ಹೀಗಾಗಿ ಈ ರೀತಿಯ ಪ್ರಶ್ನೆಗಳು ಸಹ ಸಹಜವಾಗಿ ಏಳುತ್ತಿವೆ. ಹೀಗಾಗಿ ಸುದೀಪ್ ಅವರು ಸಹ ಪ್ರಶ್ನಿಸಿದ್ದಾರೆ.