ಬಿಗ್‍ಬಾಸ್ ಮನೆಯಲ್ಲಿ ಅನುಮಾನದ ಹೊಗೆ, ಬೇಸರ ಹೆಚ್ಚಾಗಿದೆ. ಜೊತೆಯಲ್ಲಿಯೇ ಇದ್ದುಕೊಂಡು ಮೋಸ ಮಾಡಿರುವ ದಿವ್ಯಾ ಸುರೇಶ್ ಕುರಿತಾಗಿ ಮನೆಯವರಿಗೆ ಕೊಂಚ ಬೇಸರವಿದೆ. ಎಲ್ಲರೂ ದಿವ್ಯಾ ಸುರೇಶ್ ಮೇಲೆ ಬೇಸರಗೊಂಡಿದ್ದಾರೆ. ಕಿಚನ್‍ನಲ್ಲಿ ದಿವ್ಯಾ ಉರುಡುಗ, ವೈಷ್ಣವಿ, ರಘು ಈ ವಿಚಾರವಾಗಿ ಮಾತನಾಡಿಕೊಂಡಿದ್ದಾರೆ.
ಲವ್ ಲೆಟರ್ ಟಾಸ್ಕ್ ವೇಳೆ, ಬೇರೆಯವರ ಲೆಟರ್ ಹುಡುಕುವುದಕ್ಕೆ ನಿಧಿಗೆ ದಿವ್ಯಾ ಸಹಾಯ ಮಾಡಿದ್ದಳು. ಈ ವಿಚಾರವನ್ನು ತಿಳಿಯುತ್ತಿದ್ದಂತೆ ನನಗೆ ನಿಖಕ್ಕೂ ಶಾಕ್ ಆಯಿತ್ತು. ಇನ್ನು ಅವರ ಮೇಲೆ ನಂಬಿಕೆ ಬರುವುದಿಲ್ಲ. ಇದೆ ನೆನಪು ಆಗುತ್ತದೆ. ನಾನು ಒಬ್ಬರನ್ನು ನಂಬಿದರೆ ಸಂಪೂರ್ಣವಾಗಿ ನಂಬುತ್ತೇನೆ. ದಿವ್ಯಾ ಅವಳು ಸಿಕ್ಕಿ ಬಿಳುವುದು ಮಾತ್ರವಲ್ಲದೆ ಮಂಜನ್ನು ಸಿಕ್ಕಿ ಹಾಕಿದರು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿಶ್ವನಾಥ್, ರಘು ವೈಷ್ಣವಿ ನಕ್ಕು ಸುಮ್ಮನಾಗಿದ್ದಾರೆ.
ಹುಷಾರಾಗಿ ಇರು. ಯಾರ ಹತ್ತಿರವು ಏನೂ ಮಾತನಾಡಬೇಡಾ. ಯಾರೊಂದಿಗೂ ಏನನ್ನು ಚರ್ಚೆ ಮಾಡಬೇಡಾ. ನಿನ್ನ ಆಟ ನೀನು ಅಷ್ಟೇ ಎಂದು ನೀನು ಇರಬೇಕು. ಬೇರವಯರ ಬಳಿ ಯಾವ ವಿಚಾರದ ಕುರಿತಾಗಿಯೂ ಚರ್ಚೆ ಮಾಡಬೇಡಾ. ನನಗೂ ಲಿಮಿಟೇಷನ್ ಇದೆ. ಇದು ಆಟ ನಾವು ನಮ್ಮ ಕುರಿತಾಗಿ ಮಾತ್ರ ಯೋಚನೆ ಮಾಡಬೇಕು ಎಂದು ಅರವಿಂದ್ ದಿವ್ಯಾಗೆ ಆಟದ ಕೆಲವು ಸ್ಟ್ಯಾಟರ್ಜಿ ಬಗ್ಗೆ ಹೇಳಿದ್ದಾರೆ.
ಮುಂದೆ ಹೇಗೆ ಆಟ ಆಡಬೇಕು ಎನ್ನುವುದನ್ನು ಮಾತ್ರ ನೋಡು. ಆಚೆ ಬೇರೆ ಇಲ್ಲಿಯೇ ಬೇರೆ. ನಿನಗೆ ಏನೋ ಅನ್ನಿಸುತ್ತದೆಯೋ ಅದನ್ನು ಮಾಡು. ಆಡುವುದಕ್ಕೆ ಬಂದಿರುವುದು ಅದನ್ನು ಮರೆಯ ಬೇಡಾ. ನಾನು ನಿನ್ನ ಜೊತೆ ಇದ್ದೇನೆ ಖಂಡಿತವಾಗಿಯೂ. ಆದರೆ ನಾನು ನಿನಗೆ ಒಂದು ಮಟ್ಟದವರೆಗೆ ಮಾತ್ರ ಸಹಾಯ ಮಾಡಬಹುದು ಎಂದು ದಿವ್ಯಾಗೆ ಅರವಿಂದ್ ಹೇಳಿದ್ದಾರೆ. ಬಿಗ್‍ಬಾಸ್ ಮನೆಯ ಆಟ ದಿನದಿಂದದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳು ಅವರ ಸ್ನೇಹ, ಪ್ರೀತಿ ವಿಶ್ವಾಸವನ್ನು ಬದಿಗೊತ್ತು ಅವರ ಉಳಿವಿಗಾಗಿ ಮಾತ್ರ ಆಟವಾಡುತ್ತಿದ್ದಾರೆ.