ಬೆಂಗಳೂರು: ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೃದಯಾಘಾತವಾಗಿ ಖ್ಯಾತ ಹಿರಿಯ ನಟ ರಾಕ್‍ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ. ಇವರ ಅಗಲಿಗೆ ನಟ ಧನಂಜಯ್ ಸಂತಾಪ ಸೂಚಿಸಿದ್ದಾರೆ.
ನಟ ಧನಂಜಯ್ ಇನ್‍ಸ್ಟಾಗ್ರಾಂನಲ್ಲಿ ಅವರ ಜೊತೆಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಪ್ರೀತಿಯ ಸುಬ್ಬಿ, ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು ಸುಧಾಕರ್ ಅಣ್ಣ. ಇಂತಿ ನಿನ್ನ ಪ್ರೀತಿಯ ಡಾಲಿ” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ನಟ ರಾಕ್‍ಲೈನ್ ಸುಧಾಕರ್ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಸಿನಿಮಾ ಕೆಲಸಗಳಲ್ಲಿ ಸುಧಾಕರ್ ಸಕ್ರಿಯರಾಗಿದ್ದರು. ನಟ ರಾಕ್‍ಲೈನ್ ಸುಧಾಕರ್ ಇಂದು ಚಿತ್ರೀಕರಣಕ್ಕೆ ಹಾಜರಾಗಿದ್ದರು. ಆದರೆ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೃದಯಾಘಾತವಾಗಿ ಸುಧಾಕರ್ ಮೃತಪಟ್ಟಿದ್ದಾರೆ.
https://www.instagram.com/p/CFgml-ol3Ud/?igshid=705tzu5q5kub
ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ ಸುಧಾಕರ್ ವಿಧಿವಶರಾಗಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮಾಡುವ ಮೂಲಕ ನಿರ್ದೇಶಕ ಸುನಿ ಮಾಹಿತಿ ನೀಡಿದ್ದರು. “2020ಯ ರೌದ್ರಾವತಾರ ಮುಂದುವರೆದಿದೆ. ಸಿನಿಕಲಾವಿದರಾದ ರಾಕ್‍ಲೈನ್ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ” ಎಂದು ಹಿರಿಯ ನಟ ಸಾವಿಗೆ ಸಂತಪಾ ಸೂಚಿಸಿದ್ದರು.
2020ಯ ರೌದ್ರಾವತಾರ ಮುಂದುವರೆದಿದೆ..
ಸಿನಿಕಲಾವಿದರಾದ #Rocklinesudhakar ರವರು ಇಂದು ಮೇಕಪ್ ಹಚ್ಚಿರುವಾಗಲೇ
ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ..
ಅವರ ಆತ್ಮಕ್ಕೆ ಶಾಂತಿ ಸಿಗಲಿ… ಓಂ ಶಾಂತಿ.. pic.twitter.com/X6jgGnFOtB
— ಸುನಿ/SuNi (@SimpleSuni) September 24, 2020