ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಪಾಸಿಟಿವಿಟಿ ರೇಟ್ ಸಹ ಆಮೆ ಗತಿಯಲ್ಲಿ ಏರುತ್ತಿದ್ದು, ಶೇ.1.11ಕ್ಕೆ ತಲುಪಿದೆ. ಇಂದು 1,805 ಕೇಸ್ ಪತ್ತೆಯಾಗಿದ್ದು, 36 ಜನರನ್ನು ಮಹಾಮಾರಿ ಬಲಿ ಪಡೆದಿದೆ.
Advertisement
1,854 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 24,328 ಸಕ್ರಿಯ ಪ್ರಕರಣಗಳಿವೆ. ಸಾವಿನ ಪ್ರಮಾಣ ಶೇ.1.99ಕ್ಕೆ ಏರಿಕೆಯಾಗಿದೆ. ಈ ವರೆಗೆ ಒಟ್ಟು 29,15,317ರಷ್ಟು ಕೊರೊನಾ ಕೇಸ್ ಪತ್ತೆಯಾಗಿವೆ. ರಾಜ್ಯದಲ್ಲಿ ಇಂದು 1,62,338 ಕೊರೊನಾ ಟೆಸ್ಟ್ ಮಾಡಲಾಗಿದೆ. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ಆತಂಕ ಎದುರಾಗಿದೆ. ಹೀಗಾಗಿ 8 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‍ಡೌನ್ ಘೋಷಿಸಲಾಗಿದೆ. ಅಲ್ಲದೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಸ್ತರಣೆ ಮಾಡಿ ಸಿಎಂ ಆದೇಶಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಮಿತಿ, 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ- ಮಾರ್ಗಸೂಚಿಯಲ್ಲಿ ಏನಿದೆ?
Advertisement
Advertisement
ಬೆಂಗಳೂರಿನಲ್ಲಿ ಇಂದು 441 ಕೇಸ್ ದಾಖಲಾಗಿದ್ದು, 7 ಜನ ಕೊರೊನಾಗೆ ಬಲಿಯಾಗಿದ್ದಾರೆ. 434 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 8,560 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಫ್ಯೂ ಜಾರಿ
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 53, ಬೆಂಗಳೂರು ಗ್ರಾಮಾಂತರ 28, ಬೆಂಗಳೂರು ನಗರ 441, ಬೀದರ್ 1, ಚಾಮರಾಜನಗರ 30, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 69, ಚಿತ್ರದುರ್ಗ 12, ದಕ್ಷಿಣ ಕನ್ನಡ 411, ದಾವಣಗೆರೆ 3, ಧಾರವಾಡ 8, ಗದಗ 0, ಹಾಸನ 103, ಹಾವೇರಿ 1, ಕಲಬುರಗಿ 17, ಕೊಡಗು 79, ಕೋಲಾರ 45, ಕೊಪ್ಪಳ 2, ಮಂಡ್ಯ 45, ಮೈಸೂರು 90, ರಾಯಚೂರು 5, ರಾಮನಗರ 6, ಶಿವಮೊಗ್ಗ 70, ತುಮಕೂರು 58, ಉಡುಪಿ 153, ಉತ್ತರ ಕನ್ನಡ 59, ವಿಜಯಪುರ 5 ಮತ್ತು ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.