ಬೆಳಗಾವಿ: ಪ್ರತಿನಿತ್ಯ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದು ಚೂಡಾಯಿಸುತ್ತಿದ್ದ ಕಾಮುಕನೋರ್ವನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿರುವ ಘಟನೆ ಬೆಳಗಾವಿಯ ನಗರದಲ್ಲಿ ವರದಿಯಾಗಿದೆ.
ಬೆಳಗಾವಿಯ ಎಸ್‍ಪಿ ಕಚೇರಿ ಮುಂದಿನ ರಸ್ತೆಯಲ್ಲಿ ನಿನ್ನೆ ಸಂಜೆ ಮಹಿಳೆಯೊರ್ವರು ತನ್ನ ಗಂಡನೊಂದಿಗೆ ಸೇರಿ ತನಗೆ ಪ್ರತಿನಿತ್ಯ ಕಾಟಕೊಡುತ್ತಿದ್ದ ಕಾಮುಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಹಲವು ತಿಂಗಳಿಂದ ಗೋಪಾಲ್ ಗುರನ್ನವರ್ ಎಂಬಾತ ಹಿಂಬಾಲಿಸಿ ಚೂಡಾಯಿಸುತ್ತಿದ್ದ. ಈತನಿಗೆ ಮಹಿಳೆ ಹಲವು ಬಾರಿ ಎಚ್ಚರಿಕೆ ನೀಡಿದರು ಕೂಡ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಗೋಪಾಲ್‍ಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಸಹೋದರರ ಮನೆಗೆ ಡಿಸಿಎಂ ಭೇಟಿ
ಗೋಪಾಲ್ ಗುರನ್ನವರ್‍ಗೆ ಮಹಿಳೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಕೂಡ ಆತ ಮತ್ತೆ ಚೂಡಾಯಿಸಲು ಮುಂದಾಗಿದ್ದಾನೆ. ಇದರಿಂದ ನೊಂದ ಮಹಿಳೆ, ಆಕೆಯ ಪತಿಯೊಂದಿಗೆ ಸೇರಿ ಗೋಪಾಲ್‍ಗೆ ಚಪ್ಪಲಿ ಏಟು ನೀಡಿದ್ದಾರೆ. ಬಳಿಕ ಸಾರ್ವಜನಿಕರು ಸೇರುತ್ತಿದ್ದಂತೆ ಸ್ಥಳದಿಂದ ಗೋಪಾಲ್ ಕಾಲ್ಕಿತ್ತಿದ್ದಾನೆ. ಘಟನೆಯ ದೃಶ್ಯವನ್ನು ಸಾರ್ವಜನಿರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.