ನಾಸಾ ಏರೋಸ್ಪೇಸ್ ಎಂಜಿನಿಯರ್ ಸ್ವಾತಿ ಮೋಹನ್ ಜೊತೆ ಸಂವಾದ -ವೆಬಿನಾರ್‌ನಲ್ಲಿ ಭಾಗಿಯಾಗಿ

Public TV
3 Min Read
swathi mohan e1626885992956

ಚೆನ್ನೈ: ಅಮೆರಿಕ ದೂತಾವಾಸ ಕಚೇರಿಯು ಇಂಡಿಯನ್ ಅಮೆರಿಕನ್ ಏರೋಸ್ಪೇಸ್ ಎಂಜಿನಿಯರ್ ಡಾ.ಸ್ವಾತಿ ಮೋಹನ್ ಅವರೊಂದಿಗೆ ಜುಲೈ 28ರಂದು ಸಂಜೆ 7ಕ್ಕೆ ವರ್ಚುಯಲ್ ಸಂವಹನದ ಮೂಲಕ #DiasporaDiplomacy ಸರಣಿಗೆ ಚಾಲನೆ ನೀಡಲಿದೆ. ಡಾ.ಸ್ವಾತಿ ಮೋಹನ್ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ(ಜೆಪಿಎಲ್)ಯಲ್ಲಿ ಗೈಡೆನ್ಸ್, ನ್ಯಾವಿಗೇಷನ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್ ಎಂಜಿನಿಯರಿಂಗ್ ಗ್ರೂಪ್ ಸೂಪರ್ವೈಸರ್ ಆಗಿದ್ದಾರೆ. ಅವರು 2020ರ ಮಂಗಳಯಾನ ಯೋಜನೆಯ ಗೈಡೆನ್ಸ್, ನ್ಯಾವಿಗೇಷನ್ ಮತ್ತು ಕಂಟ್ರೋಲ್ ಆಪರೇಷನ್ಸ್ ಹೊಣೆ ಹೊತ್ತಿದ್ದರು.

#DiasporaDiplomacy ಸರಣಿ ಮೂಲಕ ಚೆನ್ನೈನ ಅಮೆರಿಕ ದೂತಾವಾಸವು ಭಾರತೀಯ ಮೂಲದ ಅಮೆರಿಕ ಸಾಧಕರ ಪರಿಚಯ ಮಾಡಿಕೊಡಲಿದೆ. ಈ ಸರಣಿಯಲ್ಲಿ ಈ ಸಾಧಕರು ಯಶಸ್ಸಿನ ಯಾನ ಕುರಿತು ತಮ್ಮ ಅನುಭವ ಹಂಚಿಕೊಳ್ಳಲಿದ್ದು, ಅಮೆರಿಕಾ-ಭಾರತ ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿ ಭಾರತೀಯ ಮೂಲದವರ ಪಾತ್ರದ ಕುರಿತು ಹೇಳಲಿದ್ದಾರೆ. ಈ ಸರಣಿಯು ಭಾರತೀಯ ಅಮೆರಿಕನ್ ಸಮುದಾಯವು ಅಮೆರಿಕಾದ ವ್ಯಾಪಾರ, ಶಿಕ್ಷಣ, ಆವಿಷ್ಕಾರ, ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ನೀಡಿರುವ ಅಸಾಧಾರಣ ಕೊಡುಗೆಗಳನ್ನು ಕೂಡಾ ಎತ್ತಿ ತೋರಲಿದೆ.

ಚೆನ್ನೈನಲ್ಲಿರುವ ಯು.ಎಸ್.ಕಾನ್ಸಲ್ ಜನರಲ್ ಜ್ಯುಡಿತ್ ರೇವಿನ್ ಈ ಸರಣಿಗೆ ಚಾಲನೆ ನೀಡಲಿದ್ದು, “ನಲವತ್ತು ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಭಾರತ ಮೂಲದವರಾಗಿದ್ದಾರೆ. ಈ ವಲಸಿಗರು ಅಮೆರಿಕಾ ಮತ್ತು ಭಾರತದ ನಡುವಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯಗಳನ್ನು ಗಟ್ಟಿಗೊಳಿಸು ಚಾಲಕಶಕ್ತಿಯಾಗಿದ್ದಾರೆ. ಭಾರತೀಯ ಅಮೆರಿಕನ್ನರ ಧ್ವನಿಯನ್ನು ನಿಮ್ಮೆಲ್ಲರಿಗೆ ತಲುಪಿಸುವ ನಿರೀಕ್ಷೆಯಲ್ಲಿದ್ದೇವೆ,” ಎಂದರು.

ಡಾ.ಮೋಹನ್ ಭಾರತದ ಯುನೈಟೆಡ್ ನೇಷನ್ಸ್ ಸ್ಪೇಸ್4ವಿಮೆನ್ ನೆಟ್ವರ್ಕ್ ಮಾರ್ಗದರ್ಶಕಿ ದೀಪನಾ ಗಾಂಧಿ, ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಬಾಹ್ಯಾಕಾಶ ಆಸಕ್ತರೊಂದಿಗೆ ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಅವರು ಪರ್ಸರ್ವೆರೆನ್ಸ್ ಮಾರ್ಸ್ ರೋವರ್ ಮಿಷನ್, ಭಾರತೀಯ ಮೂಲದ ಕುರಿತು, ಅವರ ಯು.ಎಸ್.ನ ಉನ್ನತ ಶಿಕ್ಷಣ ಮತ್ತು ಸ್ಟೆಮ್(ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಅಂಡ್ ಮ್ಯಾಥಮ್ಯಾಟಿಕ್ಸ್)ನಲ್ಲಿ ಅವರ ಪಾತ್ರದ ಕುರಿತಾದ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.

Swati Mohan NASA

ನೀವು ಈ ವರ್ಚುಯಲ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು: www.statedept.zoomgov.com/webinar/

ಈ ಕಾರ್ಯಕ್ರಮವನ್ನು ಚೆನ್ನೈನ ಅಮೆರಿಕನ್‌ ದೂತಾವಾಸದ ಫೇಸ್ಬುಕ್ ಪುಟದಲ್ಲಿ ಲೈವ್ ಸ್ಟ್ರೀಮ್ ಆಗುತ್ತದೆ ಲಿಂಕ್: www.facebook.com/chennai.usconsulate/ . ವೀಕ್ಷಕರು ಈ ಕಾರ್ಯಕ್ರಮದ ಅವಧಿಯಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಪ್ರಶ್ನೆಗಳನ್ನು ಕೇಳಬಹುದು. ಆಯ್ದ ಪ್ರಶ್ನೆಗಳಿಗೆ ಡಾ.ಮೋಹನ್ ಉತ್ತರಿಸುತ್ತಾರೆ.

#ಡಯಾಸ್ಪೋರಾಡಿಪ್ಲೊಮಸಿಯ ಎರಡನೆಯ ಕಾರ್ಯಕ್ರಮ ಸರಣಿಯಲ್ಲಿ ಗ್ರಾಮಿ ನಾಮ ನಿರ್ದೇಶಿತ ಭಾರತೀಯ ಅಮೆರಿಕನ್ ಗಾಯಕಿ ಪ್ರಿಯಾ ದರ್ಶಿನಿ ಆಗಸ್ಟ್ 18ರಂದು ವರ್ಚುಯಲ್ ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ. ಆಗಸ್ಟ್ 19ರಂದು ಪ್ರಿಯಾ ಮತ್ತು ಅವರ ತಂಡವು ಉದಯೋನ್ಮುಖ ಸಂಗೀತಗಾರರಿಗೆ ವರ್ಚುಯಲ್ ಕಾರ್ಯಾಗಾರ ನಡೆಸಲಿದ್ದಾರೆ. ಇದನ್ನೂ ಓದಿ: ಅಮೆರಿಕದ ರಾಯಭಾರ ಕಚೇರಿಯಿಂದ ವಿಜಯ್ ನಿಧನಕ್ಕೆ ಕನ್ನಡದಲ್ಲೇ ಸಂತಾಪ

swathi mohan 3

#ಡಯಾಸ್ಪೊರಾಡಿಪ್ಲೊಮಸಿ ಸರಣಿ ಕುರಿತು:
ಸುಂದರ್ ಪಿಚೈ. ಸುನಿತಾ ವಿಲಿಯಮ್ಸ್. ವಿವೇಕ್ ಮೂರ್ತಿ. ಸ್ಪೆಲ್ಲಿಂಗ್ ಬೀ ಗೆಲ್ಲುವುದರಿಂದ ನಮ್ಮ ಅತ್ಯಂತ ದೊಡ್ಡ ಕಂಪನಿಗಳ ನೇತೃತ್ವ ವಹಿಸುವವರೆಗೆ ಫೆಡರಲ್ ಸರ್ಕಾರದಲ್ಲಿ ಧ್ವನಿ ಎತ್ತುವವರೆಗೆ ಭಾರತೀಯ ಅಮೆರಿಕನ್ನರು ಅಪಾರ ಕೊಡುಗೆ ನೀಡುತ್ತಿದ್ದಾರೆ. ಅವರ ಯಶಸ್ಸಿನ ಗುಟ್ಟೇನು? ಈ ಸರಣಿ ಮಾತುಕತೆಯ ಮೂಲಕ #ಡಯಾಸ್ಪೊರಾಡಿಪ್ಲೊಮಸಿಯು ಅಮೆರಿಕಾದ ಬಹು ಸಾಂಸ್ಕೃತಿಕ ಸಮಾಜದಲ್ಲಿ ಭಾರತೀಯ ಅಮರಿಕನ್ನರ ಗುರುತಿನ ಮಾಹಿತಿ ನೀಡುತ್ತದೆ, ಮಾನ್ಯತೆ ಮಾಡುತ್ತದೆ ಮತ್ತು ಅವರ ಸಾಧನೆಗಳನ್ನು ಸಂಭ್ರಮಿಸುತ್ತದೆ. ವಿವಿಧ ಕ್ಷೇತ್ರಗಳ ಭಾರತೀಯ ಅಮೆರಿಕನ್ ಸಾಧಕರು ತಮ್ಮ ವೈಯಕ್ತಿಕ ಮತ್ತು ಸಮಗ್ರ ನೋಟದ ಕುರಿತು ಮಾತನಾಡಲಿದ್ದಾರೆ. ವ್ಯಾಪಾರ, ಶಿಕ್ಷಣ, ರಾಜಕೀಯ ಮತ್ತು ಕಲೆ ಹಾಗೂ ನಾಗರಿಕ ಸಮಾಜಗಳಿಗೆ ಭಾರತೀಯ ಅಮೆರಿಕನ್ ಸಮುದಾಯದ ಅಸಾಧಾರಣ ಕೊಡುಗೆಗಳ ಕುರಿತು ತಿಳಿಯಲು ಭಾಗವಹಿಸುವಂತೆ ಅಮೆರಿಕ ದೂತಾವಾಸ ಕಚೇರಿ ಮನವಿ ಮಾಡಿದೆ.

swathi mohan 1

ಡಾ.ಸ್ವಾತಿ ಮೋಹನ್, ಗೈಡೆನ್ಸ್, ನ್ಯಾವಿಗೇಷನ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್ ಎಂಜಿನಿಯರಿಂಗ್ ಗ್ರೂಪ್ ಸೂಪರ್ವೈಸರ್, ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ(ಜೆಪಿಎಲ್): ಡಾ.ಸ್ವಾತಿ ಮೋಹನ್ ನಾಸಾ ಮಾರ್ಸ್‌ 2020ರ ಯೋಜನೆಯ ಗೈಡೆನ್ಸ್ ಅಂಡ್ ಕಂಟ್ರೋಲ್ ಆಪರೇಷನ್ಸ್ ಲೀಡ್ ಆಗಿದ್ದರು. ಅವರು ಯು.ಎಸ್. ಬಾಹ್ಯಾಕಾಶ ಸಂಸ್ಥೆಯ  ಮಂಗಳ ಗ್ರಹದ ಮೇಲಿನ ಐತಿಹಾಸಿಕ ಪರ್ಸರ್ವೆರೆನ್ಸ್ ರೋವರ್ಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದರು. ಅಧ್ಯಕ್ಷ ಜೋಸೆಫ್ ಬೈಡೆನ್ ಅವರ ನಾಸಾ ಯೋಜನೆಗೆ ಡಾ.ಮೋಹನ್ ಅವರನ್ನು ಅಭಿನಂದಿಸಿದರು ಮತ್ತು ಭಾರತೀಯರು ಅಮೆರಿಕದ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಗೆ ಶ್ಲಾಘಿಸಿದರು.

Share This Article