ಬೆಂಗಳೂರು: ದಸರಾ ಹಬ್ಬಕ್ಕೆ ವಿವಿಧ ಗಣ್ಯರು ಹಾಗೂ ನಟ, ನಟಿಯರು ಶುಭಾಶಯ ಕೋರುತ್ತಿದ್ದು, ನಟಿ ರಮ್ಯಾ ಸಹ ಇದೀಗ ಕಾಮಾಕ್ಷಿ ಅರ್ಥ ತಿಳಿಸುವ ಪೋಸ್ಟ್ ಹಾಕುವ ಮೂಲಕ ದಸರಾ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಯಾವಾಗಲೂ ಬೆಳಕು ತುಂಬಿರಲಿ. ಕಾಮಾಕ್ಷಿ ಎಂಬ ಪದವು ಮೂರು ಪದಗಳಿಂದ ಕೂಡಿದೆ. ಕಾ, ಮಾ ಹಾಗೂ ಕ್ಷ್ ಮೂರು ಅಕ್ಷರಗಳು ಮೂರು ಪದಗಳನ್ನು ಸೂಚಿಸುತ್ತವೆ. ಕಾ ಎಂದರೆ ಸರಸ್ವತಿ, ಮಾ ಎಂದರೆ ಲಕ್ಷ್ಮಿ ಹಾಗೂ ಕ್ಷ್ ಎಂದರೆ ಕಣ್ಣುಗಳು ಎಂದು ತಿಳಿಸಿದ್ದಾರೆ.
ಲಕ್ಷಿ ಹಾಗೂ ಸರಸ್ವತಿಯ ಮತ್ತು ಸರಸ್ವತಿಯ ಕಣ್ಣುಗಳುಳ್ಳವರು(ಜ್ಞಾನ, ಬುದ್ಧಿವಂತಿಕೆ ಹಾಗೂ ಜ್ಞಾನೋದಯ) ಶಾಂತತೆಯನ್ನು ಪ್ರತಿನಿಧಿಸುತ್ತಾರೆ. ನಾವೆಲ್ಲರೂ ಕಾಮಾಕ್ಷಿಯರಾಗೋಣ ಎಂದು ವಿವರಿಸಿದ್ದಾರೆ.
ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು ಭಾರತದಲ್ಲಿನ ಬೆಳವಣಿಗೆಗಳ ಕುರಿತು ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಕಂಗನಾ ರಣಾವತ್ ಕುರಿತು ರಮ್ಯಾ ಪೋಸ್ಟ್ ಮಾಡಿದ್ದರು. ಅಲ್ಲದೆ ಹತ್ರಾಸ್ ಅತ್ಯಾಚಾರದ ಪ್ರಕರಣದ ಕುರಿತು ಅಕ್ಷಯ್ ಕುಮಾರ್ ಮಾಡಿದ್ದ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿ ನರೇಂದ್ರ ಮೊದಿ ವಿರುದ್ಧ ಹರಿಹಾಯ್ದಿದ್ದರು. ಹೀಗೆ ಹಲವು ಆಗುಹೋಗುಗಳ ಕುರಿತು ರಮ್ಯಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.