ಬೆಂಗಳೂರು: ಸೆಲೆಬ್ರಿಟಿಗಳ ಡ್ರಗ್ಸ್ ದಂಧೆ ಬಗ್ಗೆ ಎನ್‍ಸಿಬಿ ಬಳಿಕ ರಾಜ್ಯ ಪೊಲೀಸರ ತನಿಖೆ ಮಾಡಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಗಾಟು ಜೋರಾಗಿ ಕೇಳಿ ಬರುತ್ತಿದೆ. ಚಂದನವನದ ಖ್ಯಾತ ನಟ-ನಟಿಯರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೂವರು ಡ್ರಗ್ ಪೆಡ್ಲರ್ ಗಳನ್ನು ಎನ್‍ಸಿಬಿ ಬಂಧಿಸಿದೆ. ಈ ವಿಚಾರದ ಬಗ್ಗೆ ಪ್ರವೀಣ್ ಸೂದ್ ಅವರು ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಎನ್‍ಸಿಬಿ ಒಂದು ಕೇಂದ್ರ ತನಿಖಾ ಸಂಸ್ಥೆ, ಅವರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಅವರ ತನಿಖೆ ಬಳಿಕ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸುತ್ತೇವೆ. ಯಾವ ಸ್ಯಾಂಡಲ್‍ವುಡ್ ಆಗಲಿ ಬೇರೆ ವುಡ್ ಆಗಲಿ, ತಪ್ಪಿತಸ್ಥರು ಯಾರೇ ಆದರೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಳೆದ ಕೆಲ ದಿನಗಳಿಂದ ನಾವೂ ಕೂಡ ಡ್ರಗ್ಸ್ ವಿರುದ್ಧ ಸಮರ ಸಾರಿದ್ದೇವೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಡ್ರಗ್ಸ್ ಮಾಫಿಯಾದಲ್ಲಿ ನೈಜಿರಿಯನ್ ಪ್ರಜೆಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಕೆಲ ವಿದೇಶಿ ಪ್ರಜೆಗಳು, ಈ ಹಿಂದಿನಿಂದಲೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ವೀಸಾ ಮುಗಿದ ವಿದೇಶಿಗರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ವಿದೇಶಿಯರು ಪ್ರಾದೇಶಿಕ ನೋಂದಣಿ ಕಚೇರಿ (ಎಫ್.ಆರ್.ಆರ್.ಓ) ಇಂದಲೂ ವಿದೇಶಿ ಪ್ರಜೆಗಳ ಕುರಿತು ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದರು.