ಮೈಸೂರು: ಆರೋಗ್ಯ ತಪಾಸಣೆ ಮಾಡಲು ಬಂದ ಅಧಿಕಾರಿಗಳಿಗೆ ಮಹಿಳೆಯೊಬ್ಬಳು ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗ ಬರುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಸಮೀಪದ ಬೀರತಮ್ಮನ ಹಳ್ಳಿ ಗಿರಿಜನ ಹಾಡಿಯಲ್ಲಿ ಮಹಿಳೆಯೊಬ್ಬಳು ನೀವು ನಮ್ಮ ಹಾಡಿಗೆ ಕಾಲು ಇಡುವುದು ಬೇಡ, ನೀವು ಹಾಡಿಯಿಂದ ಹೋಗಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
Advertisement
Advertisement
ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗನೂ ಇಲ್ಲ. ನೀವೇನು ನಮಗೆ ಟೆಸ್ಟ್ ಮಾಡಿ ರೋಗ ಕಂಡು ಹಿಡಿಯುವುದು ಬೇಡ. ರೋಗ ಬಂದರೆ ನಾವೇ ವಾಸಿ ಮಾಡಿಕೊಳ್ಳುತ್ತೇವೆ ಎಂದು ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದ ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ ನಡೆಸಿದ್ದಾರೆ. ಇದನ್ನು ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ
Advertisement
ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಡಿ ಇದ್ದಾಗಿದ್ದು, ಈ ಪೈಕಿ ಕೇವಲ 7 ಮಂದಿ ಮಾತ್ರ ತಪಾಸಣೆಗೆ ಒಳಗಾಗಿದ್ದಾರೆ.
Advertisement