ಬೆಂಗಳೂರು: ಕಾಂಗ್ರೆಸ್ ಶಾಸಕರು ನಿಮ್ಮ ಸರ್ಕಾರ ತೆಗೆಯುವುದಿಲ್ಲ. ರೈತರೇ ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನವಿರೋಧಿ ಕಾಯಿದೆಗಳನ್ನು ಜಾರಿಗೆ ತರುತ್ತಿದೆ.
ಈಗ ಕರೊನಾ ಸಂಕಷ್ಟದ ಸಮಯದಲ್ಲಿಯೂ ರೈತರು, ಕಾರ್ಮಿಕರು, ಬಡವರ ಮೇಲೆ ಸುಗ್ರೀವಾಜ್ಞೆಗಳ ಮೂಲಕ ಪ್ರಹಾರ ನಡೆಸುತ್ತಿದೆ.
– @DKShivakumar#ರೈತ_ಕಾರ್ಮಿಕರ_ವಿರೋಧಿಬಿಜೆಪಿ #KarnatakaBandh pic.twitter.com/TUWwZS8oKK
— Karnataka Congress (@INCKarnataka) September 28, 2020
Advertisement
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ನಾಯಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಇದ್ದೇನೆ ಎಂದು ಬೂಟಾಟಿಕೆ ಮಾಡ್ತಾರೆ. ಆದರೆ ರಾಜ್ಯದ ರೈತರು ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ. ಈ ಕಾನೂನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.
Advertisement
ಶ್ರೀಮತಿ ಸೋನಿಯಾಗಾಂಧಿ ಅವರು
ಯುಪಿಎ ಅಧ್ಯಕ್ಷರಾಗಿದ್ದಾಗ, ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಅರಣ್ಯ ಪ್ರದೇಶದ ಅಕ್ರಮ ಜಾಗವನ್ನು ಸಕ್ರಮಗೊಳಿಸಿ ಆದೇಶ ಹೊರಡಿಸಿತು.
ಇದು ಕಾಂಗ್ರೆಸ್ ನ ಸಂಸ್ಕೃತಿ.
ರೈತರಿಗೆ ಭೂಮಿ ಕೊಡಿಸುವುದು ಕಾಂಗ್ರೆಸ್ ಬದ್ಧತೆ.
– @DKShivakumar#ರೈತ_ಕಾರ್ಮಿಕರ_ವಿರೋಧಿಬಿಜೆಪಿ #KarnatakaBandh pic.twitter.com/0Zc7WMqkf2
— Karnataka Congress (@INCKarnataka) September 28, 2020
Advertisement
Advertisement
ಈಗಾಗಲೇ ಆನೇಕಲ್ ಮತ್ತು ಕನಕಪುರ ಭಾಗದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಬೀಜ ಕೊಟ್ಟು ಬೆಲೆ ಬಳಿಕ ಕ್ವಾಲಿಟಿ ಸರಿಯಿಲ್ಲ ಅಂತ ಹೇಳಿದ್ದವು. ರೈತನ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಪ್ರತಿಭಟನೆಗೆ ಕರೆ ನೀಡಿದ್ದು, ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ವಂದನೆಗಳು ಎಂದು ತಿಳಿಸಿದರು.
ಕೊರೊನ ಸಂಕಷ್ಟದ ಸಮಯದಲ್ಲಿ ಬಿಜೆಪಿ ಸರ್ಕಾರಗಳು ರೈತರ ಸಹಾಯಕ್ಕೆ ಬರಲಿಲ್ಲ.
ಆದರೆ ಸರ್ಕಾರದಲ್ಲಿ ಇದ್ದಾಗಲೂ ರೈತರ, ಕೃಷಿ ಕಾರ್ಮಿಕರ ಜೊತೆಗೆ ನಿಂತಿದ್ದೇವೆ, ಅಧಿಕಾರ ಇಲ್ಲದಿದ್ದಗಲೂ ರೈತರೊಂದಿಗೆ ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ. ಇದು ಕಾಂಗ್ರೆಸ್ ಬದ್ಧತೆ.
– @DKShivakumar #ರೈತ_ಕಾರ್ಮಿಕರ_ವಿರೋಧಿಬಿಜೆಪಿ #KarnatakaBandh pic.twitter.com/bE4AjSvDUj
— Karnataka Congress (@INCKarnataka) September 28, 2020
ಭೂ ಸುಧಾರಣಾ ಕಾಯ್ದೆಯನ್ನು ತಂದಿದ್ದು ಕಾಂಗ್ರೆಸ್. ನಾವು ಯಾವುದೇ ಇಂತಹ ರೈತ ವಿರೋಧಿ ಕಾನೂನು ತರಲಿಲ್ಲ. ಅರಣ್ಯ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಎಸ್ಸಿ ಮತ್ತು ಎಸ್ಟಿ ಅವರಿಗೆ ಜಮೀನು ಕೊಟ್ಟೆವು. ಕಾಂಗ್ರೆಸ್ಸಿನದ್ದು ಏನೇ ಇದ್ದರೂ ಕೊಡುವ ಇತಿಹಾಸ. ಬಿಜೆಪಿ ಇತಿಹಾಸ ಕಿತ್ತುಕೊಳ್ಳುವುದು. ರೈತರ ಜಮೀನು ಕಿತ್ತುಕೊಳ್ಳಲು ಈಗ ಈ ರೀತಿಯ ಕಾನೂನು ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ರೈತರಿಗೆ ವೇತನ ಇಲ್ಲ, ಲಂಚ ಇಲ್ಲ, ಪ್ರಮೋಷನ್ ಇಲ್ಲ, ನಿವೃತ್ತಿ ಇಲ್ಲ. ಭೂಮಿ, ಬಿತ್ತನೆ, ಬೆಳೆ, ಆಕಾಶ, ಸೂರ್ಯ ಅಷ್ಟೇ ಅವರ ಜಗತ್ತು.
ಬಿಜೆಪಿ ಸರ್ಕಾರಗಳು ಇಂದು ಅದೇ ನೇಗಿಲ ಯೋಗಿಯ ಬದುಕಿಗೆ ಮರಣ ಶಾಸನ ಬರೆಯುತ್ತಿವೆ. ರೈತರನ್ನು ಉದ್ಯಮಿಗಳ ಜೀತಕ್ಕೆ ನೂಕುತ್ತಿವೆ.
– @DKShivakumar#ರೈತ_ಕಾರ್ಮಿಕರ_ವಿರೋಧಿಬಿಜೆಪಿ #KarnatakaBandh pic.twitter.com/QLUzz3OuJJ
— Karnataka Congress (@INCKarnataka) September 28, 2020
ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.