ತುಮಕೂರು: ನಾವೆಲ್ಲಾ ರಮೇಶ್ ಜಾರಕಿಹೊಳಿ ಜೊತೆಗೆ ಇದ್ದೇವೆ ಎಂದು ತಮಕೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಸ್ಟೇಡಿಯಂ, ರಾಧಕೃಷ್ಣ ರಸ್ತೆ, ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಕಾಮಗಾರಿ ಸೇರಿದಂತೆ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳ ವೀಕ್ಷಣೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕೆಲ ವ್ಯತ್ಯಾಸ ಆಗಿದೆ. ಕೆಲವೇ ದಿನದಲ್ಲಿ ಸತ್ಯಾಂಶ ಹೊರಬರಲಿದ್ದು, ಅವರಿಗೆ ಕ್ಲೀನ್ ಚಿಟ್ ಸಿಗಲಿದೆ. ರಮೇಶ್ ಜಾರಕಿಹೊಳಿ ಅವರು ಸಹಜವಾಗಿ ಸಚಿವ ಸ್ಥಾನಕ್ಕೆ ಬರ್ತಾರೆ, ನಾವೆಲ್ಲ ಜಾರಕಿಹೊಳಿ ಜೊತೆ ಇದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರವಿಶಂಕರ್ ಪ್ರಸಾದ್ ಟ್ವಿಟ್ಟರ್ ಖಾತೆ 1 ಗಂಟೆ ಲಾಕ್
Advertisement
Advertisement
Advertisement
ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿರುವ ಸಿಎಂ ಬದಲಾವಣೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲ ವಿವಾದಕ್ಕೂ ತೆರೆ ಎಳೆದಿದ್ದಾರೆ ಎಂದರು.
Advertisement
ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಸುತ್ತೂರು ಮಠಕ್ಕೆ ಭೇಟಿ ಕೊಟ್ಟಿರೋದು ಅವರ ವೈಯಕ್ತಿಕ ಇರಬಹುದು ಎಂದರು. ನಂತರ ಪಾಲಿಕೆ ಸಭಾಗಂಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.