ಬೆಂಗಳೂರು: ನಾವಿಬ್ಬರು ಭೇಟಿಯಾಗಿ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ ಎಂದು ಬರೆದು ಪತ್ನಿ ಜೊತೆ ಇರುವ ಫೋಟೋವನ್ನು ನಟ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ನಡುವೆ ಮದುವೆಯಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು, ಲಾಕ್‍ಡೌನ್ ಸಮಯದಲ್ಲಿ ತಮ್ಮ ಪತ್ನಿಯ ಜೊತೆ ಕಾಲಕಳೆಯುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿ ಇರುವ ಅವರು, ಮಡದಿಯ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
https://www.instagram.com/p/CCu6b0oJEMz/
ಇಂದು ಕೂಡ ತಮ್ಮ ಪತ್ನಿ ರೇವತಿಯವರ ಜೊತೆ ಇರುವ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡಿರುವ ನಿಖಿಲ್, ಇವತ್ತಿಗೆ ನಾವಿಬ್ಬರೂ ಭೇಟಿಯಾಗಿ 6 ತಿಂಗಳಾಗಿವೆ. ಜೊತೆಗೆ ಪತಿ-ಪತ್ನಿಯಾಗಿ ಮೂರು ತಿಂಗಳಾಗಿವೆ. ದಿನಗಳು ಬೇಗ ಕಳೆದು ಹೋಗುತ್ತಿವೆ ಎಂಬ ಫೀಲ್ ಆಗುತ್ತಿದೆ. ಜೊತೆಗೆ ನಾವಿಬ್ಬರು ಭೇಟಿಯಾಗಿ ಯುಗಗಳೇ ಕಳೆದಂತೆ ಭಾಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನಿಖಿಲ್ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದು, 100 ವರ್ಷ ಸದಾ ಹೀಗೆ ನಗು ನಗುತ್ತಾ ಖುಷಿಯಾಗಿರಿ ಎಂದಿದ್ದಾರೆ. ಇದರ ಜೊತೆಗೆ ನಟಿ ಶ್ವೇತಾ ಚಂಗಪ್ಪ ಅವರು ಕೂಡ ಕಮೆಂಟ್ ಮಾಡಿದ್ದು, ನೀವು ಜೊತೆಯಲ್ಲಿ ಬಹಳ ಮುದ್ದಾಗಿ ಕಾಣುತ್ತೀರಿ. ನಿಮಗಿಬ್ಬರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ನಟಿ ಅದ್ವಿತಿ ಶೆಟ್ಟಿ ಕಮೆಂಟ್ ಮಾಡಿ ಸುಂದರವಾದ ಫೋಟೋ, ಕಪಲ್ ಗೋಲ್ಸ್ ಎಂದು ಬರೆದಿದ್ದಾರೆ.
https://www.instagram.com/p/CCQ7L-GpwbZ/
ಮದುವೆಯ ನಂತರ ಪತ್ನಿಯ ಜೊತೆಗೆ ಒಂದಲ್ಲ ಒಂದು ಫೋಟೋ ಹಂಚಿಕೊಂಡು ಸುದ್ದಿಯಾಗುವ ನಿಖಿಲ್ ಕುಮಾರಸ್ವಾಮಿಯವರು, ಇತ್ತೀಚೆಗಷ್ಟೇ ತಮ್ಮ ಮಡದಿಯ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ ನಮಗೆ ಯಾವಾಗಲೂ ತರಬೇತಿ ನೀಡಲು ಜಿಮ್ ಅಗತ್ಯವಿಲ್ಲ. ಆದರೂ ನಮ್ಮ ಮನಸ್ಸಿಗೆ ಸ್ವಲ್ಪ ಪ್ರೇರಣೆ ಬೇಕು. ಹೀಗಾಗಿ ಪ್ರಕೃತಿಯ ಮಧ್ಯದಲ್ಲಿ ನನ್ನ ಸಂಗಾತಿಯೊಂದಿಗೆ ವರ್ಕೌಟ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.
ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಸಿನಿಮಾ ಕಾರ್ಮಿಕರಿಗೆ ನಿಖಿಲ್ ಸಹಾಯ ಮಾಡಿದ್ದು, ಬಡವರ ಖಾತೆಗೆ ಹಣ ಹಾಕುವ ಮೂಲಕ ನೆರವಾಗಿದ್ದರು. ಈಗಾಗಲೇ ಎರಡ್ಮೂರು ಚಿತ್ರಗಳಿಗೆ ನಿಖಿಲ್ ಸಹಿ ಹಾಕಿದ್ದು, ಅವು ಇನ್ನೂ ಸೆಟ್ಟೇರಿಲ್ಲ. ಇನ್ನೇನು ಸಿನಿಮಾ ಕೆಲಸಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಗಿತ್ತು. ಹೀಗಾಗಿ ನಿಖಿಲ್ ಅವರು ಪತ್ನಿಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.