ಬೆಂಗಳೂರು: ಮದುವೆಯ ಬಗ್ಗೆ ಭಾರೀ ಗಾಸಿಪ್ ಎದ್ದಿದ್ದ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಕೊನೆಗೂ ಎಂಗೇಜ್ ಆಗುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಹೌದು. ಇಂದು ಚಂದನ್ ಕುಮಾರ್ ಹಾಗೂ ಕವಿತಾ ಗೌಡ ನಿಶ್ಚಿತಾರ್ಥ ನಡೆದಿದೆ. ಈ ಮೂಲಕ ಇಬ್ಬರೂ ಹೊಸ ಬಾಳಿಗೆ ಅಡಿ ಇಡಲು ಮುನ್ನುಡಿ ಬರೆದಿದ್ದಾರೆ. ಆದರೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ದಿನಾಂಕವನ್ನು ಬಹಿರಂಗಪಡಿಸಿಲ್ಲ.
View this post on Instagram
ಈ ಸಂಬಂಧ ನಿಶ್ಚಿತಾರ್ಥದ ಕೆಲ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಚಂದನ್, ಜೀವನ ಸಂಗಾತಿ ಒಬ್ಬ ಉತ್ತಮ ಗೆಳೆಯ/ಗೆಳತಿಯಂತಿರಬೇಕು ಎಂಬುದನ್ನು ನಾನು ಕೇಳಿದ್ದೇನೆ. ಆದರೆ ನಮ್ಮ ಜೀವನದಲ್ಲಿ ಅದು ರಿವರ್ಸ್ ಆಗಿದೆ. ನಾವಿಬ್ಬರೂ ಜೀವನದ ಉತ್ತಮ ಪಾರ್ಟ್ನರ್ಸ್ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
View this post on Instagram
ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ನಾವಿಬ್ಬರು ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆಂದು ಬಹಿರಂಗಪಡಿಸಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷೀ ಬಾರಮ್ಮ’ ಧಾರವಾಹಿಯಲ್ಲಿ ನಟಿಸುತ್ತಿರುವಾಗಲೇ ಈ ಜೋಡಿ ಪ್ರೀತಿಯ ಬಲೆಗೆ ಬಿದ್ದಿದೆ ಎಂಬ ಗುಮಾನಿ ಹರಿದಾಡುತ್ತಿತ್ತು. ಆದರೆ ಚಂದನ್ ಮತ್ತು ಕವಿತಾ ನಾವಿಬ್ಬರೂ ಉತ್ತಮ ಸ್ನೇಹಿತರು ಎಂಬ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಆದರೆ ಚಂದನ್ ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡು ಕವಿತಾ ಗೌಡ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇವರಿಬ್ಬರೂ ನಿಜಕ್ಕೂ ಏಪ್ರಿಲ್ 1 ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುತೂಹಲಗಳಿಗೆ ಜೋಡಿ ಇದೀಗ ಫುಲ್ ಸ್ಟಾಪ್ ಹಾಕಿದ್ದು, ಶೀಘ್ರವೇ ಹಸೆಮಣೆ ಏರಲಿದೆ.