ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರೀ ಬೆಳವಣಿಗೆ ನಡೆಯುತ್ತಿದ್ದು, ಸಿಡಿ ಲೇಡಿ ನಾಳೆ ವಿಚಾರಣೆಗೆ ಹಾಜರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರ ಮಧ್ಯೆಯೇ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೂ ಎಸ್‍ಐಟಿ ನೋಟಿಸ್ ನೀಡಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
Advertisement
ನಾಳೆ ಸಂತ್ರಸ್ತ ಯುವತಿ ವಿಚಾರಣೆ ಹಾಜರೋಗುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ನ್ಯಾಯಧೀಶರ ಸಮಯ ನೋಡಿಕೊಂಡು ನ್ಯಾಯಾಲಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 20ಕ್ಕೂ ಹೆಚ್ಚು ಹಿರಿಯ ವಕೀಲರ ಟೀಂ ಸಿದ್ಧತೆ ಮಾಡಿಕೊಂಡಿದೆ. ಸಂತ್ರಸ್ತ ಯುವತಿಗೆ ಆತ್ಮಸ್ಥೈರ್ಯ ತುಂಬಲು ಈ ವಕೀಲರ ತಂಡ ತಯಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಇದೆಲ್ಲದರ ಮಧ್ಯೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಕಬ್ಬನ್ ಪಾರ್ಕ್ ಕ್ರೈಂ ಪೊಲೀಸರು ಆಗಮಿಸಿ ನೋಟಿಸ್ ನೀಡಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಂಟರ್‍ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.
Advertisement
ನೋಟಿಸ್ ನೀಡುತ್ತಿದ್ದಂತೆ ರಮೇಶ್ ಜಾರಕಿಹೊಳಿ ಸಚಿವ ಸುಧಾಕರ್ ನಿವಾಸಕ್ಕೆ ತೆರಳಿದ್ದು, ಮನೆಯಿಂದ ಹೊರ ಬರುತ್ತಿದ್ದಂತೆ ಗರಂ ಆಗಿದ್ದಾರೆ. ಎಸ್‍ಐಟಿ ನೋಟಿಸ್ ನೀಡಿದ ಕುರಿತು ನಾನು ಮಾತನಾಡುವುದಿಲ್ಲ, ಏನೂ ಹೇಳುವುದಿಲ್ಲ, ನಾನು ಈಗ ಹೇಳಲು ಬರುವುದಿಲ್ಲ ಎಂದು ಹೇಳಿ ಸುಧಾಕರ್ ನಿವಾಸಕ್ಕೆ ತೆರಳಿದರು. ಬೆಳಗ್ಗೆಯಿಂದ ನಿವಾಸದಲ್ಲೇ ಇದ್ದ ರಮೇಶ್ ಜಾರಕಿಹೊಳಿ, ಈಗ ಸುಧಾಕರ್ ಮನೆಗೆ ತೆರಳಿದ್ದಾರೆ. ಇನ್ನೊಂದೆಡೆ ಜಾರಕಿಹೊಳಿ ಅವರಿಗೆ ಎಸ್ ಐಟಿಯಿಂದ ನೋಟಿಸ್ ನೀಡಿದ ಬೆನ್ನಲ್ಲೆ ಮಹೇಶ್ ಕುಮಟ್ಟಹಳ್ಳಿ ಜಾರಕಿಹೊಳಿ ಭೇಟಿಗೆ ಆಗಮಿಸಿದ್ದಾರೆ.
ಎಸ್‍ಐಟಿ ಅಧಿಕಾರಿಗಳು ಸಿಡಿ ಲೇಡಿ, ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಆರೋಪಿಗಳಾದ ನರೇಶ್ ಗೌಡ ಪತ್ನಿ ಹಾಗೂ ಶ್ರವಣ್ ಸಹೋದರ ಚೇತನ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.