– ಬೆಂಗಳೂರಿನಲ್ಲೇ ಇದ್ದಾರೆ ಅಂತ ಸಹೋದರ ಸ್ಪಷ್ಟನೆ
ಬೆಂಗಳೂರು: ಸಿಡಿ ಸಂತ್ರಸ್ತೆಗೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಪ್ರಾಥಮಿಕ ತನಿಖೆ ಮುಗಿಸಿದ್ದಾರೆ. ಸ್ಥಳ ಪಂಚನಾಮೆಯನ್ನು ಮಾಡಿದ್ದಾರೆ. ಕೆಲವೊಂದಿಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
Advertisement
ಇತ್ತ ರೇಪ್ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಬೇಕಿದೆ. ಯುವತಿ ಕೊಟ್ಟ ಹೇಳಿಕೆ ಆಧರಿಸಿ ಎಸ್‍ಐಟಿ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಿದೆ. ನಾಳೆಯೇ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.
Advertisement
Advertisement
ಮೊನ್ನೆ ಸಂಜೆ ಕೊಲ್ಲಾಪುರದ ಮಹಾಲಕ್ಷ್ಮಿ ಸನ್ನಿಧಾನಕ್ಕೆ ಹೋಗಿದ್ದ ರಮೇಶ್ ಜಾರಕಿಹೊಳಿ ನಂತ್ರ ಎಲ್ಲಿ ಹೋದ್ರು ಎಂಬುದು ಗೊತ್ತಾಗಿಲ್ಲ. ಆದರೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದಾರೆ. ನಿನ್ನೆಯಷ್ಟೇ ನಾನು ಭೇಟಿ ಆಗಿದ್ದೇ ಅಂತ ಸಹೋದರ ಲಖನ್ ಜಾರಕಿಹೊಳಿ ಸ್ಪಷ್ಪಪಡಿಸಿದ್ದಾರೆ.
Advertisement
ರಮೇಶ್ ಜಾರಕಿಹೊಳಿಗೆ ಜಾಮೀನು ಕೋರಿ ಕೋರ್ಟ್‍ಗೆ ಹೋಗಬೇಕೋ ಬೇಡವೋ ಎನ್ನುವ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ. ರೇಪ್ ಆರೋಪಿ ಜಾರಕಿಹೊಳಿಯನ್ನು ಇದುವರೆಗೂ ಬಂಧಿಸದೇ ಇರುವ ಬಗ್ಗೆ ಸಂತ್ರಸ್ತೆ ಪರ ವಕೀಲ ಜಗದೀಶ್ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಮಾಜಿ ಸಂಸದ ಶಿವರಾಮೇಗೌಡ ಪ್ರತಿಕ್ರಿಯಿಸಿ, ಡ್ರಗ್ ಕೇಸ್ ಯಾವ ರೀತಿ ಹಳ್ಳ ಹಿಡಿಯಿತೋ ಅದೇ ರೀತಿ ಇದು ಕೂಡ ಹಳ್ಳ ಹಿಡಿಯುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.