ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ ನಾಳೆ ಅಂದ್ರೆ ಗುರು ಪೂರ್ಣಿಮೆ ದಿನವೇ ಸಂಭವಿಸಲಿದೆ.
ಅರೆನೆರಳಿನ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ, ಬೆಳಗ್ಗೆ 9.59ಕ್ಕೆ ಪೂರ್ಣ ಗೋಚರ ಕಂಡು, ಬೆಳಗ್ಗೆ 11.37ಕ್ಕೆ ಗ್ರಹಣ ಮೋಕ್ಷ ಕಾಣಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.
Advertisement
Advertisement
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಧನುರ್ ರಾಶಿಯಲ್ಲಿ ಸಂಭವಿಸಲಿದೆ. ಚಂದ್ರಗ್ರಹಣದ ವೇಳೆ ಮನಸ್ಸು ಅಶಾಂತವಾಗಿರಲಿದೆ ಹಾಗೂ ನಕಾರಾತ್ಮಕ ಭಾವನೆಗಳಿಂದ ಮನಸ್ಸು ಕೂಡಿರಲಿದೆ. ಹೀಗಾಗಿ ಮನಸ್ಸನ್ನು ಕೇಂದ್ರೀಕರಿಸಲು ನಿಮ್ಮಿಷ್ಟ ದೇವರನ್ನು ಆರಾಧಿಸಲು ಜ್ಯೋತಿಷ್ಯರು ಸಲಹೆ ನೀಡಿದ್ದಾರೆ.