ಬೆಂಗಳೂರು: ಚಿರು ಸರ್ಜಾ ಅವರನ್ನು ಕಳೆದುಕೊಂಡು ದುಖಃದಲ್ಲಿರುವ ಕುಟುಂಬಕ್ಕೆ ಕಿರುನಗೆ ಬಂದಿರುವುದು ಚಿರುನ ಪುಟ್ಟ ಕಂದಮ್ಮನಿಂದ. ಮೇಘನಾ ಮತ್ತು ಚಿರುನ ಮುದ್ದು ಮಗುವಿನ ಜನನದಿಂದ ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ.
ಮೇಘನಾ ರಾಜ್ ಕಳೆದ ತಿಂಗಳ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
Advertisement
ನಾಳೆ ನವೆಂಬರ್ 12ರಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ ರಾಜ್ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಯಲಿದೆ. ಸರಿಯಾಗಿ 20 ದಿನಗಳಿಗೆ ಮೇಘನಾ ರಾಜ್ ಅವರ ಮುದ್ದು ಕಂದಮ್ಮನ ತೊಟ್ಟಿಲ ಶಾಸ್ತ್ರ ಮಾಡಲು ಎರಡೂ ಕುಟುಂಬದವರು ನಿರ್ಧರಿಸಿದ್ದಾರೆ.
Advertisement
Advertisement
ತೀರ ಖಾಸಗಿಯಾಗಿ ನಡೆಯುವ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಅಣ್ಣನ ಮಗುವಿಗಾಗಿ ಧ್ರುವ 10 ಲಕ್ಷದ ವೆಚ್ಚದಲ್ಲಿ ಮಗು ಹುಟ್ಟುವ ಮೊದಲೇ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ.
Advertisement
ವಿಶೇಷ ಎಂದರೆ ಮೇಘನಾ ಮಗನಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವುದು ಕುತೂಹಲ ಆಭಿಮಾನಿಗಳಲ್ಲಿ ಮೂಡಿಸಿದೆ. ಈಗಾಗಲೇ ಅನೇಕರು ಹಲವು ಹೆಸರುಗಳಿಂದ ಪ್ರೀತಿಯಿಂದ ಕರೆಯುತ್ತಿದ್ದಾರೆ. ಗಜಕೇಸರಿ ಯೋಗದಲ್ಲಿ ಜನಿಸಿದ ಮಗುವಿಗೆ ದೇವರ ಹೆಸರನ್ನಿಡುತ್ತಾರಾ? ಚಿರಂಜೀವಿ ನೆನಪು ಸೂಚಿಸೋ ನಾಮಧೇಯ ಇಡಲಾಗುತ್ತದೆಯೇ? ಇಲ್ಲವೇ ಚಿರು ಮೇಘನಾ ಇಬ್ಬರ ಪ್ರೀತಿಯ ಕುಡಿಯಾಗಿರೋದ್ರಿಂದ ಇಬ್ಬರ ಹೆಸರಿನ ಅಕ್ಷರವನ್ನೂ ಸೇರಿಸಿ ಸುಂದರ ಹೆಸರು ಕೂಡಿ ಬರುತ್ತದೆಯೇ? ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಸುದ್ದಿ ಓದಿ:ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ