ಬೆಂಗಳೂರು: ನಾಳೆ ರಾಜ್ಯಾದ್ಯಂತ ಎಫ್‍ಡಿಎ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ಎಚ್ಚೆತ್ತ ಕೆಪಿಎಸ್‍ಸಿ ಈ ಬಾರಿ ಕಟ್ಟುನಿಟ್ಟಿನ ಭದ್ರತೆ ಕೈಗೊಂಡಿದೆ.
ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ ಅಳವಡಿಸ್ತಿದೆ. ಎಲೆಕ್ಟ್ರಾನಿಕ್ ಉಪಕರಣ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಕಿವಿಯೋಲೆ, ತಾಳಿ ಹೀಗೆ ಚಿನ್ನಾಭರಣ ಧರಿಸಿ ಪರೀಕ್ಷೆಗೆ ಹೋಗುವಂತಿಲ್ಲ.
Advertisement
Advertisement
ಪರೀಕ್ಷಾ ಕೇಂದ್ರಗಳ ಸುತ್ತ ಜೆರಾಕ್ಸ್ ಮಳಿಗೆ ಬಂದ್ ಮಾಡಿಸಲಾಗುತ್ತದೆ. ಪೇಪರ್ ಲೀಕ್ ಪ್ರಕರಣದ 21 ಆರೋಪಿಗಳಿಗೆ ಪರೀಕ್ಷೆ ನಿರಾಕರಿಸಲಾಗಿದೆ.
Advertisement
ಕೆಪಿಎಸ್‍ಸಿ ಕಚೇರಿಯಿಂದಲೇ ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಜ.24ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆಯಾಗಿತ್ತು. ಖಚಿತ ಮಾಹಿತಿಯ ಆಧಾರದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಸೋರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ ಹುದ್ದೆಯ 1,114 ಪೋಸ್ಟ್ ಗಳಿಗೆ 3.74 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.