ನಾಳೆಯೊಳಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನನ್ನು ತೆಗೆದುಹಾಕಿ- ಮಾಳವೀಯ ವಿರುದ್ಧ ಸ್ವಾಮಿ ಕಿಡಿ

Public TV
3 Min Read
Subramanian Swamy Amit Malviya

ನವದೆಹಲಿ: ಪಕ್ಷದ ಐಟಿ ಸೆಲ್ ವಿರುದ್ಧ ಕಿಡಿಕಾರಿದ್ದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ನಾಳೆಯೊಳಗೆ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ತೆಗೆದು ಹಾಕಬೇಕು ಎಂದು ಪಕ್ಷದ ನಾಯಕರಿಗೆ ಕೊನೆಯ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಟ್ವೀಟ್ ಮಾಡಿ ತಮ್ಮ ಸಂದೇಶವನ್ನು ತಿಳಿಸಿರುವ ಸುಬ್ರಮಣಿಯನ್ ಸ್ವಾಮಿ, ನಾಳೆಯೊಳಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯರನ್ನು ತೆಗೆಯಬೇಕು. ಇದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಬಳಿ ಮಾಡಿಕೊಳ್ಳುವ ನನ್ನ ಐದು ಗ್ರಾಮಗಳ ರಾಜಿ ಮಾಡಿಕೊಳ್ಳುವ ಪ್ರಸ್ತಾಪವಾಗಿದೆ. ಒಂದು ವೇಳೆ ಮಾಳವೀಯ ಅವರನ್ನು ತೆಗೆಯದಿದ್ದರೆ ಪಕ್ಷ ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ತಿಳಿಯಬೇಕಾಗುತ್ತದೆ. ಪಕ್ಷದಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಯಾವುದೇ ವೇದಿಕೆ ಇಲ್ಲದಿದ್ದರೆ, ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಬಿಜೆಪಿ ಐಟಿ ಸೇಲ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಅವರು ಭಾರೀ ಅಸಮಾಧಾನ ಹೊರಹಾಕಿದ್ದರು. ಬಿಜೆಪಿ ಐಟಿ ಸೆಲ್‍ನ ಕೆಲವರು ನನ್ನ ವಿರುದ್ಧ ವೈಯುಕ್ತಿಕ ದಾಳಿ ನಡೆಸುವುದಕ್ಕಾಗಿಯೇ ನಕಲಿ ಟ್ವಿಟ್ಟರ್ ಖಾತೆಗಳನ್ನು ತೆರೆದಿದ್ದಾರೆ. ಆದರೆ ಐಟಿ ಸೆಲ್‍ನ ಹೊಲಸು ಅಭಿಯಾನಕ್ಕೆ ಬಿಜೆಪಿಯನ್ನು ಹೊಣೆಯಾಗಿಸಬಾರದು. ನನ್ನ ವಿರುದ್ಧದ ದಾಳಿಗೆ ನನ್ನ ಹಿಂಬಾಲಕರು ಕೂಡ ವೈಯಕ್ತಿಕ ದಾಳಿ ಆರಂಭಿಸಿದ್ದಾರೆ. ಇದಕ್ಕೆ ನನ್ನನ್ನು ಹೊಣೆಯಾಗಿಸಬಾರದು ಎಂದು ಹೇಳಿದ್ದರು.

ಸುಬ್ರಮಣಿಯಣ್ ಸ್ವಾಮಿ ಅವರ ಟ್ವೀಟ್ ಬೆನ್ನಲ್ಲೇ ಹಲವು ಅಭಿಮಾನಿಗಳು ಮಾಳವೀಯ ವಿರುದ್ಧ ಟ್ವೀಟ್ ಮಾಡಿದ್ದರು. ಆದರೆ ತಮ್ಮ ಮೇಲಿನ ವೈಯುಕ್ತಿಕ ದಾಳಿ ಮಾಡುವವರಿಗೆ ಪ್ರತಿಕ್ರಿಯೆ ನೀಡುತ್ತಾ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದರು.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಆರೋಪ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ ಅವರು, ನನ್ನನ್ನು ಟ್ರೋಲ್ ಮಾಡುವಲ್ಲಿ ಬಿಜೆಪಿ ಐಟಿ ನಿರತವಾಗಿದೆ ಎಂದಿದ್ದರು. ಸ್ವಾಮಿ ಮಾತ್ರವಲ್ಲದೇ ಹಲವು ಬಿಜೆಪಿ ನಾಯಕರು, ಅಮಿತ್ ಮಾಳವೀಯ ಐಟಿ ವಿಭಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮೊದಲಿನಿಂದಲೂ ನೇರವಾಗಿಯೇ ಹೇಳಿಕೆ ನೀಡುತ್ತಾ ಬಂದಿರುವ ಬಿಜೆಪಿಯ ಹಿರಿಯ ನಾಯಕರಾಗಿರುವ ಸುಬ್ರಮಣಿಯನ್ ಸ್ವಾಮಿ ಹಲವು ಬಾರಿ ಕೇಂದ್ರದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಕ್ಷವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದರೂ ನೇರವಾಗಿಯೇ ಕೇಂದ್ರವನ್ನು ಟೀಕಿಸುತ್ತಿರುವುದು ಬಿಜೆಪಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಈ ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುಬ್ರಮಣಿಯನ್ ಸ್ವಾಮಿ ಪರ ಈಹ ಪಕ್ಷದಿಂದಲೇ ಟೀಕೆ ಜಾಸ್ತಿಯಾಗುತ್ತಿದೆ.

ಸುಬ್ರಮಣಿಯನ್ ಸ್ವಾಮಿ ಅವರು 2016 ರಿಂದ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೆಶನಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *