ಬೆಂಗಳೂರು: ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಅದರ ಅನ್ವಯ 3- 3.5 ಕೋಟಿ ಜನ ಕರ್ನಾಟಕದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. 1 ಕೋಟಿ ಕೋವಿ ಶೀಲ್ಡ್ ಗೆ 400 ಕೋಟಿ ಕೊಟ್ಟು ಆರ್ಡರ್ ಮಾಡಿದ್ದೇವೆ. 28ನೇ ತಾರಿಕಿನಿಂದ ನೊಂದಣಿ ಆರಂಭವಾಗಿದೆ, ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದರು.
ಮೇ ಒಂದರಿಂದ ಆರಂಭವಾಗಬೇಕಿದ್ದ ಲಸಿಕೆ ಆರಂಭವಾಗಲ್ಲ. ಕಂಪೆನಿಗಳು ಯಾವಾಗ ಕೊಡುತ್ತೆ ಅಂತ ಇದುವರೆಗೆ ನಮಗೆ ಮಾಹಿತಿ ಬಂದಿಲ್ಲ. ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು ಅಂತ ಮನವಿ ಮಾಡುತ್ತೇನೆ. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ. ಕಂಪೆನಿಯವರು ಅಧಿಕೃತ ಮಾಹಿತಿ ಹಂಚಿಕೊಂಡ ನಂತರ ಲಸಿಕೆ ಯಾವ ವಾರದಿಂದ ಸಿಗುತ್ತೆ ಅಂತ ಹೇಳಬಹುದು. ಅದರ ಬಗ್ಗೆ ಪ್ರಡಿಕ್ಟ್ ಮಾಡೋಕೆ ಹೋಗಲ್ಲ ಎಂದರು.
ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡುತ್ತೇವೆ. 45 ವರ್ಷ ಮೇಲ್ಪಟ್ಟವರಿಗೆ ಈಗ ಉಚಿತವಾಗಿ ನೀಡುತ್ತಿರುವ ಲಸಿಕೆ ನೀಡಿಕೆ ಯತವತ್ತಾಗಿ ಮುಂದುವರಿಯಲಿದೆ. 45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಯ 99 ಲಕ್ಷ ಡೋಸ್ ನಲ್ಲಿ 95 ಲಕ್ಷ ಡೋಸನ್ನ 45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ನೀಡಲಾಗಿದೆ. ಸರ್ಕಾರದ ನಡವಳಿಕೆಯನ್ನು ಸರ್ಕಾರದ ಕ್ರಮವನ್ನ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಜನ ಜವಬ್ದಾರಿಯುತವಾಗಿ ತಮ್ಮ ಕರ್ತವ್ಯ ಪಾಲನೆ ಮಾಡಬೇಕು. ನಿಮ್ಮ ನಿಮ್ಮ ಜವಬ್ದಾರಿಯನ್ನು ಪಾಲನೆ ಮಾಡಿ, ಜನರ ಕಷ್ಟದ ಬಗ್ಗೆ ತೋರಿಸುತ್ತಿದ್ದೀರಾ. ಮಾರ್ಗಸೂಚಿಯನ್ನು ನಾವು ಕೊಡ್ತಿದ್ದೇವೆ. ಜನ ಅದನ್ನ ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.